ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿರೋ ಪ್ರತಿ ವಲಸೆ ಕಾರ್ಮಿಕನನ್ನೂ ಸ್ವಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ - ಬೆಂಗಳೂರು ಸುದ್ದಿ

"ಸೇವಾ ಸಿಂಧು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬ ವಲಸಿಗರನ್ನು ತಲುಪಿ ಪ್ರತಿಯೊಬ್ಬರಿಗೂ ರೈಲು ಪ್ರಯಾಣದ ವ್ಯವಸ್ಥೆ ಮಾಡಲು ಐಎಸ್‌ಡಿಯಲ್ಲಿ ಒಂದು 24x7 ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ತೆರೆಯಲಾಗಿದೆ"-- ಪಿ.ಎಸ್. ಸಂಧು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಐಎಸ್‌ಡಿ

train
ರೈಲು

By

Published : May 13, 2020, 5:22 PM IST

ಬೆಂಗಳೂರು:ಕರ್ನಾಟಕ ಪೊಲೀಸರ ಆಂತರಿಕ ಭದ್ರತಾ ವಿಭಾಗ (ISD) ಪ್ರತಿಯೊಬ್ಬ ನೋಂದಾಯಿತ ವಲಸೆ ಕಾರ್ಮಿಕರನ್ನು ಸಂಪರ್ಕಿಸಿ, ಅವರಿಗೆ ತಮ್ಮ ತಮ್ಮ ಮನೆಗೆ ಮರಳಲು ರೈಲು ಪ್ರಯಾಣವನ್ನು ಏರ್ಪಡಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

"ಸೇವಾ ಸಿಂಧು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬ ವಲಸಿಗರನ್ನು ತಲುಪಿ ಪ್ರತಿಯೊಬ್ಬರಿಗೂ ರೈಲು ಪ್ರಯಾಣದ ವ್ಯವಸ್ಥೆ ಮಾಡಲು ಐಎಸ್‌ಡಿಯಲ್ಲಿ ಒಂದು 24x7 ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ತೆರೆಯಲಾಗಿದೆ" ಎಂದು ಐಎಸ್‌ಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಎಸ್. ಸಂಧು ತಿಳಿಸಿದ್ದಾರೆ.

"ಆಯಾ ರಾಜ್ಯ ಸರ್ಕಾರ(ವಲಸಿಗರ ತವರು ರಾಜ್ಯ)ಗಳು ಮನೆಗೆ ಹೋಗಲು ಆಸಕ್ತಿ ಹೊಂದಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ನಮಗೆ ನೀಡಿವೆ. ವಲಸಿಗರಿಗೆ ಸೇವಾ ಸಿಂಧು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲು ಸಹ ನಾವು ಅವಕಾಶ ನೀಡುತ್ತೇವೆ" ಎಂದು ಸಂಧು ಹೇಳಿದರು.

"ಕಳೆದ ಏಪ್ರಿಲ್ 30 ರಂದು ನನ್ನ ಮೊಬೈಲ್​ ಸಂಖ್ಯೆಯನ್ನು ಶೇರ್​ ಮಾಡಿದಾಗ, ಮನೆಗೆ ಮರಳಲು ಆಸಕ್ತಿ ಹೊಂದಿರುವ ಜನರಿಂದ ನನಗೆ 2,000 ಕ್ಕೂ ಹೆಚ್ಚು ಫೋನ್ ಕರೆಗಳು ಮತ್ತು ಹಲವಾರು ವಾಟ್ಸ್​​ಆ್ಯಪ್​ ಸಂದೇಶಗಳು ಬಂದಿವೆ" ಎಂದು ಅವರು ಹೇಳಿದರು.

ಸ್ಥಳೀಯ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ, ವಲಸಿಗರ ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ಕೆಎಸ್ಆರ್​ಟಿಸಿ ಬಸ್​​​​ಗಳಲ್ಲಿ ಗೊತ್ತುಪಡಿಸಿದ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಧು ತಿಳಿಸಿದ್ದಾರೆ.

ABOUT THE AUTHOR

...view details