ಬೆಂಗಳೂರು: ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಮೋದಿ ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಅಸಮಾಧಾನ ಹೊರಹಾಕಿದೆ.
ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ. ಬೆಲೆ ಏರಿಕೆಯ ಬಗ್ಗೆ -ಮೌನ, ಕಾಶ್ಮೀರದ ದಳ್ಳುರಿಗೆ -ಮೌನ, ಚೀನಾ ಅತಿಕ್ರಮಣಕ್ಕೆ -ಮೌನ, ರೈತರ ಹತ್ಯೆಗೆ -ಮೌನ, ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ, ನಿರುದ್ಯೋಗದ ಬಗ್ಗೆ -ಮೌನ, ಪತ್ರಿಕಾಗೋಷ್ಠಿಗೆ -ಮೌನ ಎಂದು ಲೇವಡಿ ಮಾಡಿದೆ.
ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲರ ಹಗರಣದಲ್ಲಿ #ಹೆಬ್ಬೆಟ್ ಗಿರಾಕಿ ಮೋದಿ ಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ಬಿಜೆಪಿ ನಾಯಕರಿಗಾದ ಹಂಚಿಕೆ ಎಷ್ಟು? ಎಂದು ಪ್ರಶ್ನಿಸಿದೆ.