ಕರ್ನಾಟಕ

karnataka

ETV Bharat / city

ಈಶ್ವರಪ್ಪ ವಜಾಗೊಳಿಸಲು ಕಾಂಗ್ರೆಸ್‌ ಅಹೋರಾತ್ರಿ ಧರಣಿ: ಶಕ್ತಿಸೌಧ ಆವರಣದಲ್ಲೇ ವಾಕಿಂಗ್‌, ದಿನ ಪತ್ರಿಕೆ ಓದು - ವಿಧಾನಸಭೆಯಲ್ಲೇ ಮಲಗಿದ ಕಾಂಗ್ರೆಸ್ ನಾಯಕರು

ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸದನ ಸಭಾಂಗಣದ ನೆಲದಲ್ಲೇ ಮಲಗಿದ ಕಾಂಗ್ರೆಸ್ ನಾಯಕರು ಧರಣಿ ನಡೆಸಿದರು.

By

Published : Feb 18, 2022, 9:35 AM IST

Updated : Feb 18, 2022, 9:41 AM IST

ಬೆಂಗಳೂರು: ವಿಧಾನಸಭೆಯಲ್ಲಿ ಮಲಗಿ ಅಹೋರಾತ್ರಿ ಧರಣಿ ನಡೆಸಿದ ಶಾಸಕ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ಶುಕ್ರವಾರ ಬೆಳಗ್ಗೆ ವಿಧಾನಸೌಧದ ಆವರಣದಲ್ಲಿ ವಾಕಿಂಗ್ ಮಾಡಿ, ಅಲ್ಲೇ ಕುಳಿತು ದಿನಪತ್ರಿಕೆಗಳನ್ನು ಓದಿದರು.

ಈ ವೇಳೆ ಡಿ.ಕೆ.ಶಿವಕುಮಾರ್ ಮಾತನಾಡಿ, ಈಗ ನಾವು ಈಶ್ವರಪ್ಪ ರಾಜೀನಾಮೆ ಕೇಳ್ತಾ ಇಲ್ಲ. ಈಶ್ವರಪ್ಪ ರಾಷ್ಟ್ರ ದ್ರೋಹದ ಹೇಳಿಕೆ ನೀಡಿದ್ದಾರೆ. ಸ್ವತಃ ಸಿಎಂ ಬೊಮ್ಮಾಯಿ ಅಥವಾ ಸ್ಪೀಕರ್ ಅವರೇ ಈಶ್ವರಪ್ಪ ಅವರನ್ನು ಡಿಸ್ಮಿಸ್ ಮಾಡಬೇಕು. ಇದು ನಮ್ಮೆಲ್ಲರ ಒತ್ತಾಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಎಂದರು.

ಈಶ್ವರಪ್ಪ ವಜಾಗೊಳಿಸಲು ಕಾಂಗ್ರೆಸ್‌ ಅಹೋರಾತ್ರಿ ಧರಣಿ

ರಾಜ್ಯದ ಜನರಿಗೆ ಸಂಕಷ್ಟ ಬಂದ ವೇಳೆ ಕಾಂಗ್ರೆಸ್ ಧರಣಿ ಮಾಡಲಿಲ್ಲ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಮಾಡ್ಲಿ, ಮಾತಾಡ್ಲಿ ಅದೇನೊ ಟ್ರೈಲರ್ ತೋರಿಸ್ತಿವಿ ಅಂತ ಹೇಳಿದ್ದಾರೆ. ನಾವು ಎಲ್ಲ ನೋಡೋಕೆ ರೆಡಿ. ಅವರು ಬೇಕಾದ್ರೆ ಸದನದಲ್ಲಿ ನೆರೆ ಬಗ್ಗೆ ಆದ್ರೂ ಮಾತಾಡ್ಕೊಳ್ಳಿ ಏನಾದರೂ ಮಾತಾಡ್ಕೊಳ್ಳಲಿ ಎಂದು ತಿರುಗೇಟು ನೀಡಿದರು.

ನಮ್ಮ ಧರಣಿ ಮುಂದುವರೆಯುತ್ತೆ. ಈಶ್ವರಪ್ಪನ ರಾಜೀನಾಮೆ ಬೇಕಾಗಿಲ್ಲ. ಡಿಸ್ಮಿಸ್ ಮಾಡಬೇಕು. ಬಿಜೆಪಿಯವರು ಅವರನ್ನು ಆಸ್ತಿ ಅಂತ ಮಾತನಾಡ್ತಿದ್ದಾರೆ. ತಲೆದಂಡ ಅಲ್ಲ ವಜಾ ಮಾಡಬೇಕು. ಬಿಜೆಪಿಯವರಿಗೆ ರಾಷ್ಟ್ರ ಧ್ವಜ ಅಂದ್ರೆ ಏನ್ ಅಂತ ಗೊತ್ತಿಲ್ಲ. ನಮ್ ಅಪ್ಪನ ಬಗ್ಗೆ ಮಾತನಾಡಿದ್ದಾರೆ. ನಮ್ಮ ಅಪ್ಪ ಮೇಲೆ ಇದ್ದಾರೆ. ಇದಕ್ಕೆಲ್ಲಾ ಟೈಂ ಬಂದಾಗ ಹೇಳ್ತೀನಿ. ಸ್ಪೀಕರ್ ಅವರ ಸ್ಥಾನಕ್ಕೆ ತಕ್ಕಂತೆ ಇರಬೇಕು. ಡಿಫೆಂಡ್ ಮಾಡ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಚೇಂಜ್ ಮಾಡಬೇಕು ಅಂದಾಗ ಸಂಪುಟದಿಂದ ಡ್ರಾಪ್ ಮಾಡಿದ್ರಲ್ವಾ?. ಆ ಮುತ್ತುರತ್ನವನ್ನು ಹಾಗೇ ಇಟ್ಕೊಳ್ಳಲ್ಲಿ. ರಾಷ್ಟ್ರ ಧ್ವಜಕ್ಕೆ ಗೌರವ ಇದೆ, ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಇವರು ಸಿಎಂ ಆಗಿರೋದು ಎಂದು ಹೇಳಿದರು.

ವಿಧಾನಸೌಧದ ಮುಂದೆ ಪತ್ರಿಕೆ ಓದುತ್ತಿರುವ ಕಾಂಗ್ರೆಸ್ ನಾಯಕರು

ಸೋಮವಾರ ಪ್ರತೀ ತಾಲೂಕು, ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ರಾಷ್ಟ್ರದ್ರೋಹಿ ಬಗ್ಗೆ ಡಿಸಿ, ತಹಶೀಲ್ದಾರ್​ಗೆ ಪತ್ರ ಬರೆಯಬೇಕು ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.

ಸಭಾಪತಿ ಹೊರಟ್ಟಿ ಭೇಟಿ: ಇಂದು ಬೆಳಿಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೈ ಸದಸ್ಯರಿದ್ದ ಸದನ ಸಭಾಂಗಣಕ್ಕೆ ಆಗಮಿಸಿ, ಮಾತುಕತೆ ನಡೆಸಿದರು.

Last Updated : Feb 18, 2022, 9:41 AM IST

ABOUT THE AUTHOR

...view details