ಕರ್ನಾಟಕ

karnataka

ETV Bharat / city

ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ - karnataka By-elections

ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳ ಪೈಕಿ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಮುನಿರತ್ನ ಕ್ಷೇತ್ರವಾದ ಆರ್​.ಆರ್​ ನಗರ ಮತ್ತು ಪ್ರತಾಪ್​ಗೌಡ ಪಾಟೀಲ್​ ಕ್ಷೇತ್ರವಾದ ಮಸ್ಕಿ  ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿಲ್ಲ.

ಎಲೆಕ್ಷನ್​ ಕಮಿಷನ್​

By

Published : Sep 21, 2019, 12:40 PM IST

Updated : Sep 21, 2019, 2:16 PM IST

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗೆ ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಅಂದೇ ಕರ್ನಾಟಕದ 15 ವಿಧಾನಸಭೆ ಕ್ಷೇತ್ರಗಳಿಗೂ ಉಪ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಸುನೀಲ್​ ಅರೋರಾ, ಚುನಾವಣಾ ಆಯುಕ್ತ

ಮುನಿರತ್ನ ಕ್ಷೇತ್ರವಾದ ಆರ್​.ಆರ್​ ನಗರ ಮತ್ತು ಪ್ರತಾಪ್​ಗೌಡ ಪಾಟೀಲ್​ ಕ್ಷೇತ್ರವಾದ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿಲ್ಲ. ಇಂದಿನಿಂದಲೇ ಮಾದರಿ ಚುನಾವಣಾ ಸಂಹಿತೆ ಜಾರಿಯಾಗಲಿದೆ.

ಚುನಾವಣೆ ನಡೆಯು ಕ್ಷೇತ್ರಗಳು

ಯಲ್ಲಾಪುರ, ಯಶವಂತಪುರ, ಹೊಸೂರು, ಕೆ.ಆರ್​ ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಮಹಾಲಕ್ಷ್ಮಿ ಲೇಔಟ್​, ಗೋಕಾಕ್​, ಕೆ.ಆರ್ ಪುರ, ಕಾಗವಾಡ, ಹಿರೇಕೆರೂರು, ವಿಜಯನಗರ, ಶಿವಾಜಿನಗರ, ಹುಣಸೂರು, ಅಥಣಿ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ.

ಉಪ ಚುನಾವಣೆ ದಿನಾಂಕ ಘೋಷಣೆ

ಸೆ.23 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಸೆ.30 ಕಡೆಯ ದಿನಾಂಕವಾಗಿರುತ್ತದೆ. ನಾಮಪತ್ರ ಪರಿಶೀಲನೆ ಕಡೆಯ ದಿನಾಂಕ ಅ.1, ಇನ್ನು ಅ.3 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಅ.24ಕ್ಕೆ ಫಲಿತಾಂಶ ಹೊರಬೀಳಲಿದೆ.

ಹರಿಯಾಣದ 90 ಕ್ಷೇತ್ರ ಮತ್ತು ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯುಕ್ತ ಸುನೀಲ್​ ಅರೋರಾ ತಿಳಿಸಿದ್ದಾರೆ.

Last Updated : Sep 21, 2019, 2:16 PM IST

ABOUT THE AUTHOR

...view details