ಕರ್ನಾಟಕ

karnataka

ETV Bharat / city

ಸಮಗ್ರ ಗೋ ಸ‌ಂಕುಲ ಸಮೃದ್ಧಿಗೆ ಒತ್ತು: ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆ

ಬಿ.ಎಸ್​.ಯಡಿಯೂರಪ್ಪ ಮಂಡನೆ ಮಾಡುತ್ತಿರುವ ಬಜೆಟ್​ನಲ್ಲಿ ಸಮಗ್ರ ಗೋ ಸ‌ಂಕುಲ ಸಮೃದ್ಧಿ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಜಿಲ್ಲೆಗೆ ಒಂದರಂತೆ ಗೋ ಶಾಲೆ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಸಮಗ್ರ ಗೋ ಸ‌ಂಕುಲ ಸಮೃದ್ಧಿಗೆ ಒತ್ತು:
ಸಮಗ್ರ ಗೋ ಸ‌ಂಕುಲ ಸಮೃದ್ಧಿಗೆ ಒತ್ತು:

By

Published : Mar 8, 2021, 1:08 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬಜೆಟ್ ಮಂಡನೆ ಮಾಡುತ್ತಿದ್ದು, ಗೋಶಾಲೆ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಹೌದು, 2020-21 ರಲ್ಲಿ ಕೊರೊನಾ ಲಾಕ್​ಡೌನ್​ನಿಂದಾಗಿ ಸಂಕಷ್ಟ ಏದುರಿಸುವಂತಾಗಿದೆ. ಈ ನಡುವೆಯೇ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ 2 ಲಕ್ಷದ 43 ಸಾವಿರದ 734 ಕೋಟಿಯ 8ನೇ ರಾಜ್ಯ ಬಜೆಟ್​ ಮಂಡಿಸುತ್ತಿದ್ದಾರೆ.

ಗೋವುಗಳಿಗೆ ಸಮರ್ಪಕ ನೀರು ಮತ್ತು ಮೇವು ಒದಗಿಸಲು ಸಾಧ್ಯವಾಗದೇ ರೈತರು ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಿಎಂ ರೈತರ ಪರವಾಗಿ ಹಾಗೂ ಸಮಗ್ರ ಗೋಸ‌ಂಕುಲ ಸಮೃದ್ಧಿಗೆ ಪೂರಕವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಸಮಗ್ರ ಗೋಸ‌ಂಕುಲ ಸಮೃದ್ಧಿ ಯೋಜನೆ ಜಾರಿ:

ಹೊರ ರಾಜ್ಯದ ದೇಶಿ ತಳಿಗಳಾದ ಗಿರ್, ಸಾಹಿವಾಲ್, ಒಂಗೋಲ್, ಥಾರ್ ಪಾರ್ಕರ್ ಮತ್ತು ದೇವಣಿ ತಳಿಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ರೈತರಿಗೆ ಪರಿಚಯಿಸುವ ಉದ್ದೇಶದಿಂದ ಸಮಗ್ರ ಗೋಸ‌ಂಕುಲ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ. ಜೊತೆಗೆ ಪ್ರತಿ ಜಿಲ್ಲೆಗೆ ಒಂದರಂತೆ ಗೋ ಶಾಲೆ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ABOUT THE AUTHOR

...view details