ಕರ್ನಾಟಕ

karnataka

ETV Bharat / city

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಹೈಕಮಾಂಡ್​​ಗೆ ವರದಿ ರವಾನಿಸಿದ ರಾಜ್ಯ ಬಿಜೆಪಿ - ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ರಾಜ್ಯ ಬಿಜೆಪಿ ಹೈಕಮಾಂಡ್​ಗೆ ವರದಿ ರವಾನೆ ಮಾಡಿದ್ದು, ಫಲಿತಾಂಶದ ಕುರಿತು ವಿವರಣೆ ನೀಡಿದೆ.

karnataka bjp reports high command on  Local body Election result
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಗ್ಗೆ ಹೈಕಮಾಂಡ್ ಗೆ ವರದಿ ರವಾನಿಸಿದ ರಾಜ್ಯ ಬಿಜೆಪಿ

By

Published : Jan 1, 2022, 3:02 AM IST

ಬೆಂಗಳೂರು:ಇತ್ತೀಚೆಗೆ ನಡೆದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಂಬಂಧ ಹೈಕಮಾಂಡ್​​ಗೆ ರಾಜ್ಯ ಬಿಜೆಪಿ ಘಟಕ ವರದಿ ರವಾನಿಸಿದೆ. ಫಲಿತಾಂಶದ ಕುರಿತು ವರಿಷ್ಠರಿಗೆ ವರದಿ ರವಾನೆ ಮಾಡಿರುವ ರಾಜ್ಯ ಬಿಜೆಪಿ ಫಲಿತಾಂಶದ ವಿವರಣೆಯನ್ನು ನೀಡಿದೆ.

ವರದಿಯಲ್ಲಿ ಪಕ್ಷ ಮುನ್ನಡೆ ಸಾಧಿಸಿದ ಮತ್ತು ಹಿನ್ನಡೆಯಾದ ವಾರ್ಡ್​​ಗಳ ಮಾಹಿತಿಯನ್ನು ನೀಡಿದೆ. ಹಿನ್ನಡೆಗೆ ಕಾರಣವಾದ ಅಂಶಗಳ ಬಗ್ಗೆ ವರದಿಯಲ್ಲಿ‌ ಮಾಹಿತಿ ನೀಡಲಾಗಿದೆ.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ‌.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ಗೆ ವರದಿ ನೀಡಲಾಗಿದೆ. 58 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಳಪೆ ಪ್ರದರ್ಶನ ಸಂಬಂಧ ವರದಿಯನ್ನು ನೀಡಲಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಬಿಜೆಪಿಗೆ ಮತ್ತೊಮ್ಮೆ ಶಾಕ್, ಕಾಂಗ್ರೆಸ್ ಮೇಲುಗೈ

ABOUT THE AUTHOR

...view details