ನವದೆಹಲಿ:ಧಾರ್ಮಿಕ ಆಚರಣೆಯ ಭಾಗ ಮತ್ತು ಹಕ್ಕಿನ ಆಧಾರದ ಮೇಲೆ ಹಿಜಾಬ್ ಧರಿಸುವುದನ್ನು ಮುಸ್ಲಿಂ ವಿದ್ಯಾರ್ಥಿನಿಯರು ಕೇಳುತ್ತಿದ್ದಾರೆ. ಸರ್ಕಾರ ಶಾಲಾ ಕಾಲೇಜಿನ ತರಗತಿಯೊಳಗೆ ಧಾರ್ಮಿಕತೆಯನ್ನು ಪ್ರತಿನಿಧಿಸುವ ಸಮವಸ್ತ್ರವನ್ನು ನಿಷೇಧಿಸಿದೆ. ಕರ್ನಾಟಕ ಹೈಕೋರ್ಟ್ ಕೂಡ ಇದೇ ತೀರ್ಪು ನೀಡಿದೆ. ಶಾಲೆಯ ಹೊರಭಾಗದಲ್ಲಿ ಹಿಜಾಬ್ಗೆ ನಿರ್ಬಂಧ ವಿಧಿಸಿಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸುಪ್ರೀಂಕೋರ್ಟ್ಗೆ ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ 9ನೇ ದಿನದ ವಿಚಾರಣೆ ನಡೆಯುತ್ತಿದ್ದು, ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಪ್ರಭುಲಿಂಗ ನಾವದಗಿ, ಹಿಜಾಬ್ ಶಾಲೆಯೊಳಗೆ ನಿಷೇಧಿಸಲಾಗಿದೆ. ಹೊರಗೆ ಹಾಕಿಕೊಳ್ಳಲು ಯಾವುದೇ ತಕರಾರಿಲ್ಲ ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟರು.
ಕುರಾನ್‌ನಲ್ಲಿ ಉಲ್ಲೇಖವಾಗಿರುವುದು ದೇವರ ವಾಕ್ಯವಾಗಿವೆ. ಆಚರಣೆ ಮಾಡುವುದು ಕಡ್ಡಾಯವಲ್ಲವೇ ಎಂದು ಕೋರ್ಟ್, ಎಜಿಯನ್ನು ಪ್ರಶ್ನಿಸಿತು. ಕುರಾನ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಹೇಳಿದೆ. ಆದರೆ, ಪ್ರತಿಯೊಂದೂ ಅನಿವಾರ್ಯವಲ್ಲ. ದೇಶದಲ್ಲಿ ಎಲ್ಲದಕ್ಕೂ ಸಂಪೂರ್ಣ ಸ್ವಾತಂತ್ರ್ಯವಿಲ್ಲ. ಪ್ರತಿ ಸ್ವಾತಂತ್ರ್ಯದ ಮೇಲೂ ಕೆಲ ನಿರ್ಬಂಧಗಳಿವೆ ಎಂದು ನಾವದಗಿ ಉತ್ತರಿಸಿದರು.