ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯತ್ತ ಮುನ್ನುಗುತ್ತಿದ್ದು, ಇಂದು ಒಂದೇ ದಿನ 833 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,58,417ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ: ಇಂದು 833 ಮಂದಿಗೆ ಸೋಂಕು - ಕರ್ನಾಟಕದ ಇಂದಿನ ಕೊರೊನಾ ವರದಿ
ರಾಜ್ಯದಲ್ಲಿ ಇಂದು 833 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,58,417ಕ್ಕೆ ಏರಿಕೆ ಆಗಿದೆ.
ಐವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,386ಕ್ಕೆ ಏರಿದೆ. 545 ಮಂದಿ ಗುಣಮುಖರಾಗಿದ್ದು, 9,37,898 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 8,114 ಇದ್ದು, 125 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡವಾರು 1.13 ರಷ್ಟು ಇದ್ದರೆ, ಮೃತರ ಪ್ರಮಾಣ ಶೇ.0.60 ರಷ್ಟು ಇದೆ.
ಯುಕೆಯಿಂದ ಇಂದು 196 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ 64 ಜನರಲ್ಲಿ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 29 ಜನರಿಗೆ ರೂಪಾಂತರ ಕೊರೊನಾ ಹರಡಿದೆ. ಇತ್ತ ದಕ್ಷಿಣ ಆಫ್ರಿಕಾದ ಸೋಂಕು ಮೂವರಲ್ಲಿ ಕಾಣಿಸಿಕೊಂಡು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.