ಬೆಂಗಳೂರು: 2020-21ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಸಲು ಸರ್ಕಾರ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಶಿಕ್ಷಣ ಹಕ್ಕು ಕಾಯ್ದೆ ಅಡಿ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ 3ನೇ ತ್ರೈಮಾಸಿಕ (4ನೇ ಕಂತು) 137.50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಈ ಅನುದಾನವನ್ನು ಮೊದಲ ಆದ್ಯತೆಯಾಗಿ 2019-20ನೇ ಸಾಲಿನ ಶುಲ್ಕ ಮರುಪಾವತಿಗಾಗಿ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಬಳಿಕ ಉಳಿದಿರುವ ಮೊತ್ತವನ್ನು ಹಿಂದಿನ ಸಾಲುಗಳ ಬಾಕಿ ಉಳಿದಿರುವ ಶುಲ್ಕ ಮರುಪಾವತಿಗೆ ಬಳಸಿಕೊಳ್ಳಬೇಕು. ಮೇಲಿನ ಎಲ್ಲ ಶುಲ್ಕ ಮರುಪಾವತಿಯನ್ನು ಖಜಾನೆ-2ರ ತಂತ್ರಾಂಶದ ಮೂಲಕ ಶಾಲೆಗಳ ಬ್ಯಾಂಕ್ ಖಾತೆಗೆ 15 ದಿನಗಳ ಒಳಗಾಗಿ ಜಮೆ ಮಾಡಿ, ಸದರಿ ಮೊಬಲಗನ್ನು ಪ್ರಥಮ ಆದ್ಯತೆಯಾಗಿ ಶಿಕ್ಷಕರು, ಸಿಬ್ಬಂದಿ ವೇತನಕ್ಕೆ ಬಳಸಲು ಶಾಲೆಗಳಿಗೆ ಸೂಚಿಸಲು ಸೂಕ್ತ ಕ್ರಮ ಕೈಗೊಳ್ಳವಂತೆ ನಿರ್ದೇಶನ ನೀಡಲಾಗಿದೆ.
137.50 ಕೋಟಿ ರೂ. ಆರ್ಟಿಇ ಅನುದಾನ ಬಿಡುಗಡೆ - 137.50 ಕೋಟಿ ರೂ. ಆರ್ಟಿಇ ಅನುದಾನ ಬಿಡುಗಡೆ
ಶಿಕ್ಷಣ ಹಕ್ಕು ಕಾಯ್ದೆ ಅಡಿ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ 3ನೇ ತ್ರೈಮಾಸಿಕ (4ನೇ ಕಂತು) 137.50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
137.50 ಕೋಟಿ ರೂ. ಆರ್ಟಿಇ ಅನುದಾನ ಬಿಡುಗಡೆ