ಕರ್ನಾಟಕ

karnataka

ETV Bharat / city

ಹಸಿ ಕರಗ ಉತ್ಸವಕ್ಕೆ ಸಿಎಂ ಮೆರುಗು: ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Bengaluru Karaga: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವದ ಅಂಗವಾಗಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

CM Bommai visits Dharmaraya Swamy Temple
ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಭೇಟಿ

By

Published : Apr 15, 2022, 6:44 AM IST

Updated : Apr 15, 2022, 7:14 AM IST

ಬೆಂಗಳೂರು: ಕೋವಿಡ್‌ ಹಿನ್ನೆಲೆ ಎರಡು ವರ್ಷ ದೇವಾಲಯಕ್ಕೆ ಮಾತ್ರ ಸೀಮಿತವಾಗಿದ್ದ ಐತಿಹಾಸಿಕ 'ಬೆಂಗಳೂರು ಕರಗ ಮಹೋತ್ಸವ' ವಿಜೃಂಭಣೆಯಿಂದ ನಡೆಯುತ್ತಿದೆ. ಹಸಿ ಕರಗದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಕರಗಕ್ಕೆ ಮೆರುಗು ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವದ ಅಂಗವಾಗಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಿರ್ವಿಘ್ನವಾಗಿ ಕರಗ ನಡೆಯಲಿ, ನಾಡಿಗೆ ಒಳಿತಾಗಲಿ ಎಂದು ಸಿಎಂ ಪ್ರಾರ್ಥಿಸಿದರು ಬಳಿಕ ಕರಗ ಹೊರುತ್ತಿರುವ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದರು. ಜ್ಞಾನೇಂದ್ರ ಅವರು ಕರಗ ಹೊರುತ್ತಿರುವುದು ಇದು 12ನೇ ಬಾರಿ ಎಂಬುದು ವಿಶೇಷ.

ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

ಇಂದು (ಶುಕ್ರವಾರ) ರಾತ್ರಿ 10 ಗಂಟೆಗೆ ರಥೋತ್ಸವ ಮತ್ತು ಬೆಳಗಿನ ಜಾವ 3 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಗುರುವಾರ ಹಸಿ ಕರಗ ಮಹೋತ್ಸವ ನಡೆದಿದ್ದು, ಏ.16ರಂದು ಕರಗ ಶಕ್ತೋತ್ಸವ ಮತ್ತು ಧರ್ಮರಾಯ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ.

ಇದನ್ನೂ ಓದಿ:ಬೆಂಗಳೂರು ಕರಗ ಮಹೋತ್ಸವ ಮೆರವಣಿಗೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

Last Updated : Apr 15, 2022, 7:14 AM IST

ABOUT THE AUTHOR

...view details