ಬೆಂಗಳೂರು: ದೆಹಲಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಕರ್ನಾಟಕದಿಂದ 20 ಸ್ಪರ್ಧಿಗಳು ಭಾಗವಹಿಸಿದ್ದು, ಎಂಟು ಪದಕಗಳನ್ನು ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.
ದೆಹಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆ: 8 ಪದಕಗಳನ್ನು ಗೆದ್ದು ಬೀಗಿದ ಕನ್ನಡಿಗರು!
ದೆಹಲಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಕರ್ನಾಟಕದಿಂದ 20 ಸ್ಪರ್ಧಿಗಳು ಭಾಗವಹಿಸಿದ್ದು, ಎಂಟು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ದೆಹಲಿಯಲ್ಲಿ ನಡೆದ ವಾಕೋ ಇಂಡಿಯಾ ಓಪನ್ ಇಂಟರ್ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ 20 ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಮಾರತ್ತಹಳ್ಳಿಯ ಹೆಟ್ ಲಿಂಬೋ ಫಿಟ್ನೆಸ್ ಕ್ಲಬ್‌ನ ಸ್ಪರ್ಧಿಗಳು 8 ಚಿನ್ನದ ಪದಕ, 5 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಒಟ್ಟು 13 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಮಾರತ್ತಹಳ್ಳಿಯ ಹೆಟ್ ಲಿಂಬೋ ಫಿಟ್ನೆಸ್ ಕ್ಲಬ್‌ನ 11 ಸ್ಪರ್ಧಿಗಳು ವಿಜೇತರಾಗಿದ್ದಾರೆ. ಅನನ್ಯ, ಸಾಗರ್, ಪ್ರಿಯಾಂಕ ರೆಡ್ಡಿ- ತಲಾ 2 ಚಿನ್ನ, ಕೇಶವ್- 1 ಚಿನ್ನ, ದರ್ಶನ್-1 ಚಿನ್ನದ ಪದಕ ಗೆದ್ದರೆ, ಚರಣ್, ಧನುಷ್, ಸಂಕೇತ್,ಹರೀಶ್. ಎನ್ ತಲಾ ಒಂದೊಂದು ಬೆಳ್ಳಿ ಪದಕ ಗೆದ್ದಿದ್ದಾರೆ. ಹರೀಶ್ ವಿ. 1 ಹಾಗೂ ಮಹಮ್ಮದ್ 2 ಕಂಚಿನ ಪದಕ ಪಡೆದಿದ್ದಾರೆ. ವಿಜೇತ ಸ್ಪರ್ಧಿಗಳನ್ನು ಮಾರತ್ತಹಳ್ಳಿಯಲ್ಲಿ ತರಬೇತುದಾರರಾದ ವಿನೋದ ರೆಡ್ಡಿ, ಪುನೀತ್ ರೆಡ್ಡಿ ಹಾಗೂ ಸ್ನೇಹಿತರು ಸನ್ಮಾನಿಸಿದರು.
TAGGED:
Delhi Kickboxing Competition