ಕರ್ನಾಟಕ

karnataka

ETV Bharat / city

ಮಾಸ್ತಿ ಕನ್ನಡದ ಆಸ್ತಿಯಾದರೆ, ಚಿದಾನಂದಮೂರ್ತಿ ಕನ್ನಡತ್ವದ ಆಸ್ತಿ: ಚಿಮೂ ಆತ್ಮೀಯರು ಹೇಳಿದ ಮಾತು - kannada scholar and activist m chidananda murthy

ಹಿರಿಯ ಸಾಹಿತಿ ಹಾಗೂ ಸಂಶೋಧಕ ಚಿದಾನಂದಮೂರ್ತಿ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಮುರುಗಪ್ಪ ಅವರು ಚಿಮೂ ಜೊತೆಗೆ ಕಳೆದ ಕ್ಷಣಗಳನ್ನು ಬಿಚ್ಚಿಟ್ಟರು.

Kannada scholar Chidananda Murthy passes away
ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಮುರುಗಪ್ಪ

By

Published : Jan 11, 2020, 10:13 PM IST

ಬೆಂಗಳೂರು:ಹಂಪಿಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿದಾನಂದಮೂರ್ತಿ ಅವರು ಕೂಡ ಕಾರಣೀಕರ್ತರು. ಹಂಪಿ ಅಂದಕೂಡಲೇ‌ ತೀರಾ‌ ಭಾವನಾತ್ಮಕವಾಗಿ ಅವರು ಪ್ರತಿಕ್ರಿಯೆ ತೋರಿಸುತ್ತಿದ್ದರು. ಕನ್ನಡಕ್ಕೆ ಕುತ್ತು ಬಂದಾಗ ಅವರು ಹೊಳೆಗೆ ಹಾರಿದ್ದರು ಎಂದು ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಮುರುಗಪ್ಪ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಮುರುಗಪ್ಪ

ಮಾಸ್ತಿಯವರು ಕನ್ನಡದ ಆಸ್ತಿಯಾದರೆ, ಚಿಮೂ ಅವರು ಕನ್ನಡತ್ವದ ಆಸ್ತಿ ಎಂದೂ ವರ್ಣಿಸಿದರು. ಅವರ ಮೂರ್ತಿ ಚಿಕ್ಕದಾದರೂ ವ್ಯಕ್ತಿತ್ವ ಬಹಳ ದೊಡ್ಡದಾಗಿತ್ತು. ಚಿಕ್ಕವರು-ದೊಡ್ಡವರು ಯಾರೇ ಇದ್ದರೂ, ಅವರೊಟ್ಟಿಗೆ ಸರಳವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರನ್ನು ನಾವು ಕಳೆದುಕೊಂಡಿದ್ದು, ಸಂಶೋಧನೆ ಮತ್ತು ಸಾಹಿತ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details