ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಘೋಷಣೆ ಇಂದು ಸಂಜೆ 4 ಗಂಟೆಗೆ ಹೊರಬೀಳುವ ಸಾಧ್ಯತೆ ಇದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ರಾಜ್ಯಾಧ್ಯಕ್ಷರ ಘೋಷಣೆ ಬಾಕಿ ಉಳಿದಿದೆ. ಡಾ.ಮಹೇಶ್ ಜೋಷಿ ಅವರು ಅತ್ಯಧಿಕ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.
ಡಾ.ಮಹೇಶ್ ಜೋಷಿ ಅವರು 50 ಸಾವಿರಕ್ಕೂ ಅಧಿಕ ಮತ ಪಡೆದಿದ್ದಾರೆ. ಇನ್ನೊಬ್ಬ ಸ್ಪರ್ಧಿ ಡಾ.ಶೇಖರಗೌಡ ಮಾಲಿಪಾಟೀಲರಿಂತ 46 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಅಂಚೆ ಮೂಲಕ ರವಾನೆಯಾಗುವ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಹೊರರಾಜ್ಯದ ಒಟ್ಟು ಮತಗಳ ಸಂಖ್ಯೆ 4479 ಇದ್ದು, ವಿಳಾಸದಲ್ಲಿ ಮತದಾರ ಇಲ್ಲದ ಕಾರಣಕ್ಕೆ ಈಗಾಗಲೇ 1343 ಮತಗಳು ವಾಪಸಾಗಿವೆ. ಈ ಮತಗಳ ಎಣಿಕೆ ಇನ್ನಷ್ಟೇ ನಡೆಯಬೇಕಿದೆ. ಆದರೆ ಪ್ರಥಮ ಹಾಗೂ ದ್ವಿತೀಯ ಅಭ್ಯರ್ಥಿಗಳ ನಡುವಿನ ಅಂತರ ಹೆಚ್ಚಿರುವುದರಿಂದ ಈ ಮತಗಳ ಎಣಿಕೆ ಔಪಚಾರಿಕವಷ್ಟೇ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.