ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 66 ಸಾಧಕರನ್ನು ಆಯ್ಕೆ ಮಾಡಿ, ಸರ್ಕಾರ ಇಂದು (ಅ.31) ಘೋಷಿಸಿದೆ.
ಇದರ ಜೊತೆಗೆ ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನಾಳೆ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿ ಪತ್ರದ ಜತೆಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಸ್ಥೆ, ಸಾಧಕರು ಹಾಗೂ ಅವರ ಕ್ಷೇತ್ರಗಳನ್ನು ಇಲ್ಲಿದೆ:
ಸಾಹಿತ್ಯ ಕ್ಷೇತ್ರ:
ಮಹಾದೇವ ಶಂಕನಪುರ - ಚಾಮರಾಜನಗರ |
ಡಿ.ಟಿ ರಂಗಸ್ವಾಮಿ- ಚಿತ್ರದುರ್ಗ |
ಜಯಲಕ್ಷ್ಮೀ ಮಂಗಳಮೂರ್ತಿ- ರಾಯಚೂರು |
ಅಜ್ಜಂಪುರ ಮಂಜುನಾಥ್- ಚಿಕ್ಕಮಗಳೂರು |
ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ- ವಿಜಯಪುರ |
ಸಿದ್ಧಪ್ಪ ಬಿದರಿ- ಬಾಗಲಕೋಟೆ |
ರಂಗಭೂಮಿ:
ಫಕೀರಪ್ಪ ರಾಮಪ್ಪ ಕೊಡಾಯಿ |
ಪ್ರಕಾಶ್ ಬೆಳವಾಡಿ |
ರಮೇಶ್ ಗೌಡ ಪಾಟೀಲ |
ಮಲ್ಲೇಶಯ್ಯ ಎನ್ |
ಸಾವಿತ್ರಿ ಗೌಡರ್ |
ಜಾನಪದ:
ಆರ್ ಬಿ ನಾಯಕ್- ವಿಜಯಪುರ |
ಗೌರಮ್ಮ ಹುಚ್ಚಪ್ಪ ಮಾಸ್ತರ್ |
ದುರ್ಗಪ್ಪ ಚೆನ್ನದಾಸರ |
ಬನ್ನಂಜೆ ಬಾಬು ಆಮೀನ್ |
ಮಲ್ಲಿಕಾರ್ಜುನ ರಾಚಪ್ಪ |
ವೆಂಕಪ್ಪ ಗೋವಿಂದಪ್ಪ ಭಜಂತ್ರಿ |
ವೆಂಕಪ್ಪ ಗೋವಿಂದಪ್ಪ ಭಜಂತ್ರಿ |
ಸಂಗೀತ:
ತ್ಯಾಗರಾಜು ಸಿ |
ಹೆರಾಲ್ಡ್ ಸಿರಿಲ್ ಡಿಸೋಜಾ |
ಶಿಲ್ಪಕಲೆ:
ಡಾ.ಜಿ.ಜ್ಞಾನಾನಂದ |
ವೆಂಕಣ್ಣ ಚಿತ್ರಗಾರ |
ಸಮಾಜ ಸೇವೆ:
ಸೂಲಗಿತ್ತಿ ಯಮುನವ್ವ |
ಮದಲಿ ಮಾದಯ್ಯ |
ಮುನಿಯಪ್ಪ ದೊಮ್ಮಲೂರು |
ಬಿ.ಎಲ್ .ಪಾಟೀಲ್ ಅಥಣಿ |
ಡಾ.ಜಿ.ಎನ್.ರಾಮಕೃಷ್ಣೇಗೌಡ |
ವೈದ್ಯಕೀಯ:
ಸುಲ್ತಾನ್ ಬಿ ಜಗಳೂರು |
ವ್ಯಾಸ ದೇಶಪಾಂಡೆ |
ಡಾ.ಎ.ಆರ್ ಪ್ರದೀಪ್ |
ಸುರೇಶ್ ರಾವ್ |
ಸುದರ್ಶನ್ |
ಶಿವನಗೌಡ ರುದ್ರಗೌಡ ರಾಮನಗೌಡರ್ |
ಕ್ರೀಡೆ:
ರೋಹನ್ ಬೊಪ್ಪಣ್ಣ |
ಕೆ.ಗೋಪಿನಾಥ್ |
ರೋಹಿತ್ ಕುಮಾರ್ ಕಟೀಲ್ |
ಎ.ನಾಗರಾಜ್ |
ಸಿನಿಮಾ:
ದೇವರಾಜ್ |
ಶಿಕ್ಷಣ:
ಸ್ವಾಮಿ ಲಿಂಗಪ್ಪ |
ಶ್ರೀಧರ್ ಚಕ್ರವರ್ತಿ |
ಪ್ರೊ. ಪಿ.ವಿ ಕೃಷ್ಣಭಟ್ |
ಸಂಕೀರ್ಣ:
ಡಾ.ಬಿ. ಅಂಬಣ್ಣ |
ಕ್ಯಾಪ್ಟನ್ ರಾಜಾರಾವ್ |
ಗಂಗಾವತಿ ಪ್ರಾಣೇಶ್ |