ಬೆಂಗಳೂರು: ರಾಜ್ಯದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ನವೆಂಬರ್ 1, 2020 ರಿಂದ ಅಕ್ಟೋಬರ್ 21 2021 ರವರೆಗೆ ಕನ್ನಡ ಕಾಯಕ ವರ್ಷಾಚರಣೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಪ್ರಾಧಿಕಾರದ ಮಾಜಿ ಅಧ್ಯಕ್ಷರ ಜೊತೆ ಸಭೆ, ಸಮಾಲೋಚನೆ ನಡೆಸಿದ ಅಧ್ಯಕ್ಷ ಟಿ.ಎಸ್ ನಾಗಾಭರಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ಗೆ ಪತ್ರ ಬರೆದಿದ್ದಾರೆ.
ಪ್ರಮುಖವಾಗಿ ರಾಜ್ಯ ಸರ್ಕಾರದ ಭಾಷಾನೀತಿ, ಕನ್ನಡವನ್ನು ಅನುಷ್ಠಾನಗೊಳಿಸಬೇಕಾದ ಆಡಳಿತ ವಲಯದ ಹಿರಿಯ ಅಧಿಕಾರಿಗಳೇ ಪದೇ ಪದೆ ಒಳಾಡಳಿತದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುತ್ತಿದ್ದಾರೆ. ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಗಮನಿಸುತ್ತಿದೆ. ಸಾರ್ವಜನಿಕ ವಲಯದಿಂದಲೂ ಸಾಕಷ್ಟು ದೂರುಗಳು ಬಂದಿದೆ. ಹೀಗಾಗಿ ರಾಜ್ಯ ಸರ್ಕಾರದ ಭಾಷಾನೀತಿಯಂತೆ ಕಾಲಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಕನ್ನಡಪರ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಗೊಳಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಡಳಿತ ವಲಯದ ಹಿರಿಯ ಅಧಿಕಾರಿಗಳಿಂದಲೇ ಕನ್ನಡ ಕಡೆಗಣನೆ; ಶಿಕ್ಷೆಗೆ ಒತ್ತಾಯಿಸಿ ಟಿ.ಎಸ್.ನಾಗಾಭರಣ ಪತ್ರ ಭಾಷಾನೀತಿ ಉಲ್ಲಂಘಿಸಿದ ಅಧಿಕಾರಿ,ನೌಕರರನ್ನು ನಿಯಮಾನುಸಾರ ಶಿಕ್ಷೆಗೆ ಒಳಪಡಿಸದ ಹೊರತು ನಿರೀಕ್ಷಿತ ಮಟ್ಟದಲ್ಲಿ ಕನ್ನಡ ಅನುಷ್ಠಾನ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿಯಂತೆ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು, ನಾಮಫಲಕಗಳಲ್ಲಿ ಕನ್ನಡವನ್ನು ಮೇಲ್ಪಂಕ್ತಿಯಲ್ಲಿ ಹಾಕಲು ಶಾಸಕಾಂಗದ ಮುದ್ರೆ ಒತ್ತುವ ಕೆಲಸ ಆಗಬೇಕಿದೆ.
ಆಡಳಿತ ವಲಯದ ಹಿರಿಯ ಅಧಿಕಾರಿಗಳಿಂದಲೇ ಕನ್ನಡ ಕಡೆಗಣನೆ; ಶಿಕ್ಷೆಗೆ ಒತ್ತಾಯಿಸಿ ಟಿ.ಎಸ್.ನಾಗಾಭರಣ ಪತ್ರ ಪಂಚಾಯಿತಿ ಮಟ್ಟದಲ್ಲಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು, ಡೀಮ್ಡ್ ವಿ.ವಿಗಳಲ್ಲಿ ಕನ್ನಡ ಕಲಿಸಬೇಕು, ಕನ್ನಡಕ್ಕೆ ಸಂಬಂಧಿಸಿದ ಮಾಹಿತಿಗಳಿರುವ ಆ್ಯಪ್ ಆರಂಭಿಸಬೇಕು, ಕನ್ನಡದ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಬೇಕು, ಉದ್ಯೋಗ, ಉದ್ಯಮಗಳಲ್ಲಿ ಕನ್ನಡಗರಿಗೆ ಆದ್ಯತೆ ಸಿಗಬೇಕು. ಕನ್ನಡಿಗರಿಗೆ ಬ್ಯಾಂಕಿಂಗ್ ತರಬೇತಿ ನೀಡಬೇಕು, ಮೊದಲಾದ ವಿಷಯಗಳನ್ನು ಬರಗೂರು ರಾಮಚಂದ್ರಪ್ಪ, ಡಾ.ಮುಖ್ಯಮಂತ್ರಿ ಚಂದ್ರು, ಡಾ.ಎಲ್ ಹನುಮಂತಯ್ಯ, ಪ್ರೊ.ಎಸ್ ಜಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ನಿರ್ಣಯಗಳನ್ನು ಜಾರಿಗೊಳಿಸಲು ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.