ಮಹದೇವಪುರ (ಬೆಂಗಳೂರು): ಮುಗಿಲು ಹೊಸ ಆಲ್ಬಮ್ ಸಾಂಗ್ ವೀಕ್ಷಿಸಲು ಮುಗಿಬಿದ್ದ ಪ್ರೇಕ್ಷಕರು. ಕನ್ನಡದಲ್ಲಿ ಹೊಸ ಆಲ್ಬಮ್ ಸಾಂಗ್ಗಳು ಸದ್ಯದ ಮಟ್ಟಿಗೆ ಸದ್ದು ಮಾಡುತ್ತಿದ್ದು, ಅಂಥದರ ಪೈಕಿ ಮುಗಿಲು ಎಂಬ ನೂತನ ಆಲ್ಬಮ್ ಸಾಂಗ್ ಸೇರ್ಪಡೆಗೊಂಡಿದೆ.
ಮೂಲತಃ ಟ್ರೋಲ್ ಪೇಜ್, ಸೋಷಿಯಲ್ ಮೀಡಿಯಾಗಳಲ್ಲಿ ಗುರುತಿಸಲ್ಪಟ್ಟ ಯುವ ಪ್ರತಿಭೆಗಳೇ ನಟಿಸಿರುವ ಸಾಂಗ್ ಇದಾಗಿದ್ದು, ಇದೇ ಮೊದಲ ಬಾರಿಗೆ ಕನ್ನಡದ ಆಲ್ಬಮ್ ಸಾಂಗ್ವೊಂದು ಥಿಯೇಟರ್ನಲ್ಲಿ ಪ್ರದರ್ಶನ ಕಂಡಿದೆ.
ಬೆಂಗಳೂರಿನ ಕಾಡುಗುಡಿ ಸಮೀಪದ ಕಿನೋ ಥಿಯೇಟರ್ನಲ್ಲಿ ಆಲ್ಬಮ್ ಸಾಂಗ್ನ್ನು ಬಿಡುಗಡೆ ಮಾಡಲಾಗಿದ್ದು ಮತ್ತು ಇದನ್ನು ವೀಕ್ಷಿಸಲು ಅಭಿಮಾನಿಗಳ ದಂಡು ಆಗಮಿಸಿ, ಥಿಯೇಟರ್ ಹೌಸ್ ಫುಲ್ ಆಗಿತ್ತು. ಹೊಸ ಪ್ರತಿಭೆಗಳು ನಟಿಸಿರುವ ಈ ಹಾಡಿನಲ್ಲಿ ಅನಿಲ್ ಅಥರ್ವ, ಶುಭಾ, ಮನು, ಗಿರಿ ಮತ್ತು ಅರ್ಪಿತಾ ಅವರು ಅಭಿನಯಿಸಿದ್ದಾರೆ. ಮೂಲತಃ ಸೋಶಿಯಲ್ ಮೀಡಿಯಾ, ಟ್ರೋಲ್ ಪೇಜ್ಗಳಿಂದ ಹೆಸರು ಮಾಡಿದ ಈ ಕಲಾವಿದರು ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.