ಬೆಂಗಳೂರು: ಕೋವಿಡ್ ಕಾರಣ ಕಳೆದೆರಡು ವರ್ಷದಿಂದ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಲೆಕ್ಕಾಚಾರವಿಟ್ಟುಕೊಂಡೇ ಜೀವನ ನಡೆಸುವವರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಇಂತಹ ಸಮಯದಲ್ಲಿ ಮಕ್ಕಳ ಶಾಲಾ ಫೀಸ್ ಸೇರಿದಂತೆ ಇತರೆ ಖರ್ಚುಗಳು ಪೋಷಕರಿಗೆ ಹೊರಲಾಗದ ಹೊರೆಯಾಗಿದೆ.
ಬ್ರ್ಯಾಂಡ್ಗಳಿಗೆ ಜೋತು ಬೀಳದಿರಿ, ಪೋಷಕರಿಗೆ ಒತ್ತಡ ಹಾಕದಿರಿ: ಕ್ಯಾಮ್ಸ್ - ಖಾಸಗಿ ಶಾಲೆಗಳ ನಿಯಮಗಳು
ಕೋವಿಡ್ನಿಂದ ಕಂಗೆಟ್ಟಿರುವ ಪೋಷಕರು ತಮ್ಮ ಮಕ್ಕಳ ಶಾಲಾ ಖರ್ಚು ಭರಿಸಲು ಪರದಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಕ್ಯಾಮ್ಸ್, ಖಾಸಗಿ ಶಾಲೆಗಳಿಗೆ ಪ್ರಮುಖ ಸಲಹೆ, ಸೂಚನೆ ನೀಡಿದೆ.
ಕ್ಯಾಮ್ಸ್ ಮನವಿ ಏನು? ಕೋವಿಡ್ ನಂತರ ಮಕ್ಕಳಿಗೆ ಒಳ್ಳೆಯ ಶಾಲೆಗಳಲ್ಲೇ ಶಿಕ್ಷಣ ಕೊಡಿಸಬೇಕು ಎಂದು ಪೋಷಕರು ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಫೀಸ್ ಕಟ್ಟಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳು ಇದೇ ಬ್ರ್ಯಾಂಡ್ನ ಬಟ್ಟೆಗಳನ್ನೇ ತೊಡಬೇಕು, ಇಂಥದ್ದೇ ಕಂಪನಿಯ ಪುಸ್ತಕಗಳನ್ನೇ ಬಳಸಬೇಕು, ಇಂಥದ್ದೇ ಮಾದರಿಯ ಶೂಸ್ ಧರಿಸಬೇಕು ಎಂದೆಲ್ಲಾ ಒತ್ತಡ ಹೇರದಂತೆ ಹಾಗೂ ಪೋಷಕರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಮ್ಮ ಸದಸ್ಯತ್ವ ಖಾಸಗಿ ಶಾಲೆಗಳಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಹೆದ್ದಾರಿಯಲ್ಲಿ ಕಾಳಿಂಗ ಸರ್ಪಗಳ ಮಿಲನ: ವಿಡಿಯೋ