ಬೆಂಗಳೂರು:ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಷರುತ್ತುಬದ್ಧ ಜಾಮೀನು ಪಡೆದ ಶಾಸಕ ಕಂಪ್ಲಿ ಗಣೇಶ್ ಇಂದು ಕೆಲ ಷರತ್ತುಗಳನ್ನ ಪೊರೈಸಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಹೊಸಪೇಟೆಯಲ್ಲಿರುವ ಹುಲಿಯಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಶಾಸಕರನ್ನುಜೈಲಿಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಬೇಕಿತ್ತು. ಆದರೆ, ಜೈಲರ್ ರಾಮೇಶ್ ಆಸ್ಪತ್ರೆಯಲ್ಲೇ ಬಿಡುಗಡೆ ಭಾಗ್ಯ ಕಲ್ಪಿಸಿದ್ದಾರೆ ಎಂಬ ಮಾತುಗಳ ಸಹ ಕೇಳಿಬಂದಿವೆ.