ಕರ್ನಾಟಕ

karnataka

ETV Bharat / city

ಹೆಂಡತಿಯನ್ನು ಕರೆಯಿಸು ಎಂದವನ ಹೆಣ ಬಿಳಿಸಿ ಪರಾರಿಯಾಗಿದ್ದ ಆರೋಪಿ ಬಂಧನ! - ಬೆಂಗಳೂರು ಅಪರಾಧ ಸುದ್ದಿ

ಆರೋಪಿ ಮಣಿಕಂಠ ಕಳೆದ ಎರಡು ವರ್ಷಗಳ ಹಿಂದೆ ರಮ್ಯಾ ಎಂಬಾಕೆಯೊಂದಿಗೆ ವಿವಾಹ ಮಾಡಿಕೊಂಡಿದ್ದ. ಪ್ರಾರಂಭದಲ್ಲಿ ಈ ಜೋಡಿ ಚೆನ್ನಾಗಿತ್ತು. ಆದರೆ ತದನಂತರ ರಮ್ಯಾ, ತಿಮ್ಮೇಗೌಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ಮೇರೆಗೆ ದಂಪತಿ ನಡುವೆ ಬಿರುಕು ಉಂಟಾಗಿತ್ತು.

ಕೊಲೆ ಆರೋಪಿ ಬಂಧನ

By

Published : Oct 17, 2019, 9:29 PM IST

ಬೆಂಗಳೂರು :ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಕಳೆದ 14 ರಂದು ಸುಂಕದಕಟ್ಟೆ ಬಳಿ ತಿಮ್ಮೇಗೌಡ ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿದ್ದ ಆರೋಪಿ ಬ್ಯಾಡರಹಳ್ಳಿಯ ಮಣಿಕಂಠನನ್ನು ಇದೀಗ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೆಂಡತಿಯನ್ನು ಕಳುಹಿಸು ಎಂದವನ ಹೆಣ ಬಿಳಿಸಿ ಪರಾರಿಯಾಗಿದ್ದ ಆರೋಪಿ ಬಂಧನ

ಪ್ರಕರಣದ ಹಿನ್ನೆಲೆ

ಆರೋಪಿ ಮಣಿಕಂಠ ಕಳೆದೆರಡು ವರ್ಷಗಳ ಹಿಂದೆ ರಮ್ಯಾ ಎಂಬಾಕೆಯೊಂದಿಗೆ ವಿವಾಹ ಮಾಡಿಕೊಂಡಿದ್ದನು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ತದನಂತರ ರಮ್ಯಾ ಅಲ್ಲೇ ವಾಸವಾಗಿದ್ದ ತಿಮ್ಮೇಗೌಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ಮೇರೆಗೆ ದಂಪತಿ ನಡುವೆ ಬಿರುಕು ಉಂಟಾಗಿತ್ತು. ಇದಕ್ಕಾಗಿ ಮೇಲಿಂದ ಮೇಲೆ ಜಗಳವಾಗಿದ್ದರಿಂದ ರಮ್ಯಾ ಮನೆಯಿಂದ ಹೊರಬಂದಿದ್ದಳು.

ಹೆಂಡತಿ ದೂರವಾಗಿದ್ದರಿಂದ ಮನನೊಂದಿದ್ದ ಮಣಿಕಂಠನಿಗೆ ನಿರಂತರವಾಗಿ ತಿಮ್ಮೇಗೌಡ ಕರೆ ಮಾಡಿ ನಿನ್ನ ಹೆಂಡತಿಯನ್ನು ವಾಪಸ್​ ಕರೆಯಿಸು ಎಂದಿದ್ದಾನೆ. ಆತನ ಮಾತಿನಿಂದ ಆಕ್ರೋಶಗೊಂಡಿರುವ ಮಣಿಕಂಠ ಹುಡುಕಿಕೊಂಡು ಬಂದು ತಿಮ್ಮೇಗೌಡನ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆದರೆ ಈ ವೇಳೆ ಮಣಿಕಂಠನ ಕೊಲೆ ಮಾಡಿರುವ ತಿಮ್ಮೇಗೌಡ ತಲೆಮರೆಸಿಕೊಂಡಿದ್ದನು. ಸದ್ಯ ಆತನ ಬಂಧನ ಮಾಡಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.

ABOUT THE AUTHOR

...view details