ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಸರ ಕಳ್ಳತನ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವೃದ್ಧೆಯ ಸರ ಎಗರಿಸಿದ ಕಳ್ಳರು: ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೈಚಳಕ - ಕಲ್ಕೆರೆ ವೃದ್ಧೆಯ ಸರ ಕಳ್ಳತನ
ಕಲ್ಕೆರೆಯ ನಿವಾಸಿ ಚಿನ್ನಮ್ಮ ಸರ ಕಳೆದುಕೊಂಡ ವೃದ್ಧೆ. ಮಾ. 11ರಂದು ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಸಂಜೆ ವೇಳೆ ಓಡಾಡುವ ವೃದ್ಧೆಯರನ್ನು ಗುರಿಯಾಗಿಸಿಕೊಳ್ಳುವ ಇಬ್ಬರು ಖದೀಮರ ಪೈಕಿ ಓರ್ವ ಚಿನ್ನಮ್ಮ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತಿದ್ದಾನೆ.

ಕಸಿಯುವ ರಭಸದಲ್ಲಿ ಸರ ತುಂಡಾಗಿದೆ. 50 ಗ್ರಾಂನಷ್ಟು ಸರ ಖದೀಮನ ಪಾಲಾದರೆ, 20 ಗ್ರಾಂ ಸರದ ತುಂಡು ವೃದ್ಧೆಯ ಬಳಿ ಉಳಿದಿತ್ತು. ಕೃತ್ಯದ ಬಳಿಕ ಸರಗಳ್ಳರು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿ ನಗರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.