ಬೆಂಗಳೂರು:20 ದಿನಗಳ ಬಳಿಕ ಕಲಾಸಿಪಾಳ್ಯ ಪೊಲೀಸ್ ಠಾಣೆ ಇಂದಿನಿಂದ ಆರಂಭವಾಗಿದ್ದು, ಠಾಣೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಸಿಬ್ಬಂದಿಗೆ ಧೈರ್ಯ ತುಂಬಿದರು. ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ, ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಈ ವೇಳೆ ಉಪಸ್ಥಿತರಿದ್ದರು.
20 ದಿನಗಳ ಬಳಿಕ ಕಲಾಸಿಪಾಳ್ಯ ಪೊಲೀಸ್ ಠಾಣೆ ಕಾರ್ಯಾರಂಭ - City Police Commissioner Bhaskar Rao
ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾದ ಕಲಾಸಿಪಾಳ್ಯ ಪೊಲೀಸ್ ಠಾಣೆಯು 20 ದಿನಗಳ ಬಳಿಕ ಪುನರಾರಂಭವಾಗಿವೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಗೆ ಭೇಟಿ ನೀಡಿ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು.
![20 ದಿನಗಳ ಬಳಿಕ ಕಲಾಸಿಪಾಳ್ಯ ಪೊಲೀಸ್ ಠಾಣೆ ಕಾರ್ಯಾರಂಭ Kalasipalya police station](https://etvbharatimages.akamaized.net/etvbharat/prod-images/768-512-7955090-240-7955090-1594282785830.jpg)
ಮಾಸ್ಕ್ ಧರಿಸದ ಮತ್ತು ಮುಖಕ್ಕೆ ಫೇಸ್ಶೀಲ್ಡ್ ಹಾಕದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಈ ಠಾಣೆಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು (26) ದಾಖಲಾಗಿದ್ದವು. ಅದರಲ್ಲಿ ಇಂದು 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕು ಕಾಣಿಸಿಕೊಂಡ ಬಳಿಕ 20 ದಿನಗಳ ಕಾಲ ಸೀಲ್ಡೌನ್ ಮಾಡಲಾಗಿತ್ತು. ಸದ್ಯ ಇಂದಿನಿಂದ ಠಾಣೆ ಜನರ ಸೇವೆಗೆ ಮರಳಿದೆ.
ಸಿಬ್ಬಂದಿ ಜೊತೆ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಹಾಗೆಯೇ ಠಾಣೆಯನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಎಲ್ಲರೂ ಮಾಸ್ಕ್, ಫೇಸ್ಶೀಲ್ಡ್, ಗ್ಲೌಸ್ ಹಾಕಬೇಕು. ಅನಗತ್ಯವಾಗಿ ಓಡಾಡುವುದು, ವಸ್ತುಗಳನ್ನು ಮುಟ್ಟುವುದು ಮಾಡಬೇಡಿ. ಮಾಸ್ಕ್ ಧರಿಸದ ಜನರಿಗೆ ಕಠಿಣಕ್ರಮ ಕೈಗೊಳ್ಳಿ. ನಿಮ್ಮೊಂದಿಗೆ ಸರ್ಕಾರ ಮತ್ತು ನಾವಿದ್ದೇವೆ ಎಂದರು.