ಕರ್ನಾಟಕ

karnataka

ETV Bharat / city

ಹೋಲ್​​ಸೇಲ್ ತರಕಾರಿ ವ್ಯಾಪಾರಕ್ಕೆ ಮಾರ್ಗಸೂಚಿ ಕೊಟ್ಟಿಲ್ಲ: ವರ್ತಕರ ಅಸಮಾಧಾನ - ಕಲಾಸಿಪಾಳ್ಯ ಮಾರುಕಟ್ಟೆ

ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ತೆರಳಲು ಬಸ್ಸುಗಳಿಲ್ಲ. ಖಾಸಗಿ ವಾಹನಗಳಲ್ಲಿ ಹೋದರೆ ಪೊಲೀಸರು ಸೀಜ್ ಮಾಡುತ್ತಾರೆ. ಹೀಗಾಗಿ, ಕಲಾಸಿಪಾಳ್ಯದಲ್ಲೇ ವ್ಯಾಪಾರ ನಡೆಸಲು ಸಮಯಾವಕಾಶ ನಿಗದಿ ಮಾಡಿಕೊಡಬೇಕೆಂದು ಹೋಲ್​​ಸೇಲ್ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ಗೋಪಿ ಒತ್ತಾಯಿಸಿದ್ದಾರೆ.

Bangalore
ಹೋಲ್​​ಸೇಲ್ ತರಕಾರಿ ವ್ಯಾಪಾರಕ್ಕೆ ಮಾರ್ಗಸೂಚಿ ಕೊಟ್ಟಿಲ್ಲ: ವ್ಯಾಪಾರಸ್ಥರ ಅಸಮಾಧಾನ

By

Published : May 8, 2021, 7:21 AM IST

ಬೆಂಗಳೂರು:ದಿನನಿತ್ಯದ ಚಿಲ್ಲರೆ ತರಕಾರಿ ವ್ಯಾಪಾರಿಗಳಿಗೆ ಬೆಳಗ್ಗೆ 6 ರಿಂದ 10 ಸಮಯ ನಿಗದಿ ಮಾಡಲಾಗಿದೆ. ಆದರೆ, ಹೋಲ್​​ಸೇಲ್ ವ್ಯಾಪಾರಿಗಳಿಗೆ ಸರಿಯಾದ ಮಾರ್ಗಸೂಚಿ ನೀಡಿಲ್ಲ ಎಂದು ಕಲಾಸಿಪಾಳ್ಯ ತರಕಾರಿ ಹಾಗೂ ಹಣ್ಣುಗಳ ಹೋಲ್​​ಸೇಲ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ಗೋಪಿ ಅಸಮಾಧಾನ ಹೊರಹಾಕಿದ್ದಾರೆ.

ಹೋಲ್​​ಸೇಲ್ ತರಕಾರಿ ವ್ಯಾಪಾರಕ್ಕೆ ಮಾರ್ಗಸೂಚಿ ಕೊಟ್ಟಿಲ್ಲ: ವ್ಯಾಪಾರಸ್ಥರ ಅಸಮಾಧಾನ

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ನಗರದಿಂದ 25 ಕಿ.ಮೀ ದೂರಕ್ಕೆ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ತೆರಳಲು ಬಸ್ಸು, ಆಟೋಗಳಿಲ್ಲ. ಖಾಸಗಿ ವಾಹನಗಳಲ್ಲಿ ಹೋದರೆ ಪೊಲೀಸರು ಸೀಜ್ ಮಾಡುತ್ತಾರೆ. ಪಾಸ್​ಗಳನ್ನೂ ನೀಡಿಲ್ಲ. ಮಧ್ಯಾಹ್ನದವರೆಗೆಯಾದರೂ ಹೋಗುವುದಕ್ಕೆ, ಬರುವುದಕ್ಕೆ ಅನುಮತಿ ಬೇಕಾಗುತ್ತದೆ. ಗ್ರಾಹಕರಿಗೂ ಹೋಗಿಬರಲು ಅನುಕೂಲ ಇಲ್ಲ. ಹೀಗಾಗಿ, ಕಲಾಸಿಪಾಳ್ಯದಲ್ಲೇ ವ್ಯಾಪಾರ ನಡೆಸಲು ಸಮಯಾವಕಾಶ ನಿಗದಿ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಸದ್ಯ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಸ್ವಂತ ಬಂಡವಾಳದಿಂದ ಶೆಡ್ ಹಾಕಲಾಗ್ತಿದೆ. ಆದರೆ, ಹೋಗಿ ಬರಲು ವ್ಯವಸ್ಥೆಗಳಿಲ್ಲ. ಹಮಾಲಿಗಳು, ರೈತರು, ಗ್ರಾಹಕರಿಗೂ ಬರಲು ಸಾಧ್ಯವಿಲ್ಲ. ಇದಕ್ಕಿಂತ ಸಂಪೂರ್ಣವಾಗಿ ಬಂದ್ ಮಾಡಿ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಬುದ್ಧಿ ಹೇಳಿದ್ದಕ್ಕೆ ಸಿಟ್ಟು: ಅಪ್ಪ-ಅಮ್ಮನನ್ನೇ ಕೊಂದ 14 ವರ್ಷದ ಬಾಲಕ!

ಮೇ 10 ರಿಂದ ಮೇ 24ರ ವರೆಗೆ ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಈ ವೇಳೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ವ್ಯಾಪಾರಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ.

ABOUT THE AUTHOR

...view details