ಬೆಂಗಳೂರು:ಕಲಬುರಗಿ ನಗರ ಪಾಲಿಕೆ ಜಿದ್ದಾಜಿದ್ದಿ ವಿಚಾರವಾಗಿ ಇದೀಗ ಸಚಿವ ಆರ್.ಅಶೋಕ್ ಅಖಾಡಕ್ಕೆ ಇಳಿದಿದ್ದಾರೆ. ಕಲಬುರಗಿ ಪಾಲಿಕೆ ಮೈತ್ರಿ ಕಗ್ಗಂಟು ಮುಂದುವರೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿಯಲು ಜೆಡಿಎಸ್ ಜೊತೆ ತೀವ್ರ ಕಸರತ್ತು ನಡೆಸುತ್ತಿದೆ. ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಬಿಜೆಪಿ ಪಾಳಯದಲ್ಲಿ ಆತಂಕ ಶುರುವಾಗಿದೆ. ಇದೀಗ ಸಚಿವ ಆರ್.ಅಶೋಕ್ ಅಖಾಡಕ್ಕೆ ಇಳಿದಿದ್ದಾರೆ.
ಸಿಎಂ ಬೊಮ್ಮಾಯಿ ಸೂಚನೆ ಹಿನ್ನೆಲೆಯಲ್ಲಿ ಹೆಚ್ಡಿಕೆ ಭೇಟಿಗೆ ಸಚಿವ ಆರ್.ಅಶೋಕ್ ಮುಂದಾಗಿದ್ದಾರೆ. ಬಿಡದಿಯ ಫಾರ್ಮ್ ಹೌಸ್ಗೆ ತೆರಳಿರುವ ಆರ್.ಅಶೋಕ್, ಮಾಜಿ ಸಿಎಂ ಹೆಚ್ಡಿಕೆ ಜೊತೆ ಕಲಬುರಗಿ ಪಾಲಿಕೆ ಮೈತ್ರಿ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಜೊತೆ ಮೈತ್ರಿ ಪಕ್ಕಾ ಮಾಡಿಕೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ. ಮೈತ್ರಿ ಮಾತುಕತೆಯಲ್ಲಿ ಬಿಜೆಪಿ ಯಾವ ಸೂತ್ರ ಮುಂದಿಡುತ್ತೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ನ ಕೆಲ ಕಾರ್ಪೊರೇಟರ್ಗಳು ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಜೆಡಿಎಸ್ಗೇ ಮೇಯರ್ ಸ್ಥಾನ ಬಿಟ್ಟು ಕೊಡುತ್ತಾ ಎಂಬ ಕುತೂಹಲ ಮೂಡಿದೆ.
ಜೆಡಿಎಸ್ ಮೈತ್ರಿ ಸಂಧಾನಕ್ಕೆ ಆರ್.ಅಶೋಕ್ ಅವರನ್ನು ಸಿಎಂ ಕಳಿಸಿದ್ದಾರೆ. ಬಿಡದಿ ಫಾರ್ಮ್ ಹೌಸ್ನಲ್ಲಿ ಮೈತ್ರಿ ಕುರಿತು ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಕಲಬುರಗಿ ಪಾಲಿಕೆ ಮೈತ್ರಿ ಕಸರತ್ತು: ಹೆಚ್ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್. ಅಶೋಕ್!
ಕಲಬುರಗಿ ಪಾಲಿಕೆ ಮೈತ್ರಿ ಕಗ್ಗಂಟಾದ ಹಿನ್ನೆಲೆಯಲ್ಲಿ ಸಚಿವ ಆರ್. ಅಶೋಕ್ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಸಂಬಂಧ ಮಾತುಕತೆ ನಡೆಸಲು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲು ಬಿಡದಿಗೆ ಅಶೊಕ್ ತೆರಳಿದ್ದಾರೆ.
ಹೆಚ್ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್.ಅಶೋಕ್
Last Updated : Sep 11, 2021, 5:54 PM IST