ಬೆಳಗಾವಿ: ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು 4 ಲಕ್ಷ ರೂ. ಮೌಲ್ಯದ 6.67 ಟನ್ ಭಾರಿ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ; 6.67 ಟನ್ಗಳಷ್ಟು ಅಪಾರ ಪ್ರಮಾಣದ ಸ್ಫೋಟಕ ವಶ, ನಾಲ್ವರ ಬಂಧನ - ಅಕ್ರಮ ಸ್ಫೋಟಕ ಸಾಗಾಟಗಾರರನ್ನು ಬಂಧಿಸಿ ಕಾಕತಿ ಪೊಲೀಸರು
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾಕತಿ ಪೊಲೀಸರು ಹೊನಗಾ ಗ್ರಾಮದ ದಾಬಾ ಬಳಿ ವಾಹನವನ್ನು ವಶಕ್ಕೆ ಪಡೆದು, 6.675 ಟನ್ ಜಿಲಿಟಿನ್ ಕಡ್ಡಿ, ಡಿಟೋನೇಟರ್ ಜಪ್ತಿ ಜೊತೆಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಬೊಬಲವಾಡ ಗ್ರಾಮದ ರಮೇಶ ಲಕ್ಕೊಟಿ, ರಾಜು ಶಿರಗಾವಿ, ಮುಗಳಿ ಗ್ರಾಮದ ಅರುಣ್ ಮಠದ ಹಾಗೂ ವಿನಯ್ ಕಿನ್ನವರ್ ಬಂಧಿತರು. ಆರೋಪಿಗಳು ಟಾಟಾ ಕ್ಯಾಂಟರ್, ಬೊಲೆರೊ ಪಿಕ್‌ಅಪ್ ವಾಹನದಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿಕೊಂಡು ಕರೋಶಿ ಗ್ರಾಮದಿಂದ ಧಾರವಾಡ, ಗದಗ ಜಿಲ್ಲೆಗೆ ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾಕತಿ ಪೊಲೀಸರು ಹೊನಗಾ ಗ್ರಾಮದ ದಾಬಾ ಬಳಿ ವಾಹನವನ್ನು ವಶಕ್ಕೆ ಪಡೆದು, 6.675 ಟನ್ ಜಿಲಿಟಿನ್ ಕಡ್ಡಿ, ಡಿಟೋನೇಟರ್ ಜಪ್ತಿ ಮಾಡಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಫೋಟಕ ವಸ್ತುಗಳ ಮೌಲ್ಯ 4 ಲಕ್ಷ ರೂ. ಎನ್ನಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.