ಕರ್ನಾಟಕ

karnataka

ETV Bharat / city

ಕೆ.ಆರ್.ಪುರ ಕೈ-ಕಮಲ ಅಭ್ಯರ್ಥಿಗಳ ಆಸ್ತಿ ಎಷ್ಟು? ಅಫಿಡವಿಟ್‌ನಲ್ಲಿ ತಿಳಿಸಿರುವ ಮಾಹಿತಿ ಇಲ್ಲಿದೆ.. - ಬೈರತಿ ಬಸವರಾಜ್​​ ಆಸ್ತಿ ಘೋಷಣೆ

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರ (ಅಫಿಡವಿಟ್‌)ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ.

ಬೈರತಿ ಬಸವರಾಜ್​​ , ನಾರಾಯಣಸ್ವಾಮಿ

By

Published : Nov 19, 2019, 9:37 AM IST

ಬೆಂಗಳೂರು: ತಮ್ಮ ಬಳಿ‌ 134.16 ಕೋಟಿ ರೂಗೂ ಹೆಚ್ಚು ಆಸ್ತಿ ಇದೆ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಘೋಷಿಸಿಕೊಂಡಿದ್ದಾರೆ.

ಬೈರತಿ ಬಸವರಾಜ್ ಅವರು 134.16 ಕೋಟಿ ರೂಗಿಂತ ಹೆಚ್ಚು ಚರಾಸ್ತಿ ಹೊಂದಿದ್ದು, ಪತ್ನಿ ಪದ್ಮಾವತಿ ಹೆಸರಿನಲ್ಲಿ 56.57 ಲಕ್ಷ ಚರಾಸ್ತಿ ಹಾಗೂ 10.250 ಕೆ.ಜಿ ಚಿನ್ನ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಬಸವರಾಜ್ ಹೆಸರಿನಲ್ಲಿ 15,58 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ, ಪತ್ನಿ ಹೆಸರಿನಲ್ಲಿ 27,73 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್​​ನಲ್ಲಿ‌ ಮಾಹಿತಿ‌ ನೀಡಿದ್ದಾರೆ.

ಅವಿಭಕ್ತ ಕುಟುಂಬದಿಂದ ಪತ್ನಿ ಹೆಸರಿನಲ್ಲಿ 5.39 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಕ್ಯಾಲಸನಹಳ್ಳಿ, ಬಾಗಲೂರು ಹಾಗೂ ರಾಮಗೊಂಡನಹಳ್ಳಿಯಲ್ಲಿ 11.32 ಕೋಟಿ ರೂ.ಮೌಲ್ಯದ ಕೃಷಿ ಜಮೀನು, ರಾಮಗೊಂಡನಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ 30 ಕೋಟಿ ರೂ.ಮೌಲ್ಯದ ಕೃಷಿಯೇತರ ಜಮೀನು ಹಾಗೂ ವಿವಿಧ ಬ್ಯಾಂಕ್​​ಗಳಲ್ಲಿನ ಠೇವಣಿ ಸೇರಿ ಒಟ್ಟು 134 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ನಾರಾಯಣಸ್ವಾಮಿ ಆಸ್ತಿ ಎಷ್ಟು ಗೊತ್ತಾ ?

ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಒಟ್ಟು 30 ಕೋಟಿ ರೂ.ಮೌಲ್ಯದ ಆಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಪತ್ನಿ ಪುಷ್ಪಾವತಿ ಹೆಸರಿನಲ್ಲಿ 28.32 ಲಕ್ಷ ರೂ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ನಾರಾಯಣಸ್ವಾಮಿ ಅವರ ಬಳಿ 49.85 ಲಕ್ಷ ರೂ ಮೌಲ್ಯದ ಬಿಎಂಡಬ್ಲ್ಯು ಕಾರು, 32 ಲಕ್ಷ ರೂ ಮೌಲ್ಯದ ಫಾರ್ಚುನರ್, ಹೊಂಡಾ ಜಾಜ್ ಸೇರಿ ಇತರೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ದಿಲಿಪ್ ಸಾಗರ್ ಹೆಸರಿನಲ್ಲಿ 1 ಕೋಟಿ ರೂ. ಮೌಲ್ಯದ ವೊಲ್ಟೊ ಕಾರು ಹೊಂದಿದ್ದಾರೆ.

ಅಲ್ಲದೇ ಚಿನ್ನ ಹಾಗೂ ವಿವಿಧ ಬ್ಯಾಂಕ್​​ಗಳಲ್ಲಿ ಇಟ್ಟಿರುವ ಹಣ ಸೇರಿ 3.09 ಕೋಟಿ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ಬಹುತೇಕ ಆಸ್ತಿ ಹೊಂದಿರುವ ಅವರು, ಪುಷ್ಪಾವತಿ ಹೆಸರಿನಲ್ಲಿ 73 ಲಕ್ಷ ರೂ ಮೌಲ್ಯದ ಕೃಷಿ ಜಮೀನು, 2.50 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು ಹಾಗೂ 5.50 ಕೋಟಿ ರೂ ಕೃಷಿಯೇತರ ಆಸ್ತಿ ಹೊಂದಿರುವುದಾಗಿ ಆಯೋಗಕ್ಕೆ ನೀಡಿದ ಅಫಿಡವಿಟ್​​ನಲ್ಲಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details