ಬೆಂಗಳೂರು: ಜಟಾಪಟಿಯ ನಡುವೆ ಮತ ಪ್ರಚಾರ ನಡೆಸಿದ್ದ ಜೆಡಿಎಸ್ ನಾಯಕರು ಲೆಕ್ಕಾಚಾರ ತಲೆಕೆಳಗಾಗಿದ್ದು. ಕೆ.ಆರ್.ಪುರ ಮತ ಕ್ಷೇತ್ರದ ಗೆಲುವಿನ ವಿಶ್ವಾಸದಲ್ಲಿ ಕೃಷ್ಣಮೂರ್ತಿ ಅವರಿಗೆ ನೋಟಾ ಗಿಂತ ಕಡಿಮೆ ಮತಗಳು ಲಭಿಸಿವೆ.
ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನೋಟಾಗಿಂತ ಕಡಿಮೆ ಮತ..! - ಉಪಚುನಾವಣಾ ನೋಟಾ ಫಲಿತಾಂಶ ಸುದ್ದಿ
ಕೆ.ಆರ್ ಪುರಂದಲ್ಲಿ ಮತ ಪ್ರಚಾರ ನಡೆಸಿದ್ದ ಜೆಡಿಎಸ್ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದ್ದು. ಕೆ.ಆರ್.ಪುರ ಮತ ಕ್ಷೇತ್ರದ ಗೆಲುವಿನ ವಿಶ್ವಾಸದಲ್ಲಿ ಕೃಷ್ಣಮೂರ್ತಿಯರಿಗೆ ನೋಟಾ ಗಿಂತ ಕಡಿಮೆ ಮತಗಳು ಲಭಿಸಿವೆ. ಒಟ್ಟು 5181 ಮತಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ಹೀನಾಯ ಸೋಲುಂಡಿದೆ.
ಇನ್ನೊಂದೆಡೆ ಜೆಡಿಎಸ್ ಗೆ ಕ್ಷೇತ್ರದಲ್ಲಿ ನೆಲೆಯೇ ಇರಲಿಲ್ಲ. ಹೀಗಿದ್ದರೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದರು. ಕ್ಷೇತ್ರದಲ್ಲಿ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ವರಿಷ್ಠರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದೇ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗೆ 1,39,879 ಕಾಂಗ್ರೆಸ್ ಅಭ್ಯರ್ಥಿಗೆ 76,436 ಮತಗಳು ದೊರಕಿದ್ದು 63,443 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿಗೆ ಕೇಲವ 5181 ಮತಗಳು ಬಿದ್ದಿವೆ.