'ಬಿಬಿಎಂಪಿ ಚುನಾವಣೆ ಮುಂದೂಡಿಕೆಗೂ ಜಂಟಿ ಸದನ ಪರಿಶೀಲನಾ ಸಮಿತಿಗೂ ಸಂಬಂಧವಿಲ್ಲ' - Joint Review Committee President S. Raghu
ಇಂದು ನಡೆದ ಜಂಟಿ ಸದನ ಪರಿಶೀಲನಾ ಸಮಿತಿ ಸಭೆಗೂ ಬಿಬಿಎಂಪಿ ಎಲೆಕ್ಷನ್ ಮುಂದೂಡಿಕೆ ಮಾಡುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಜಂಟಿ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷ ಎಸ್. ರಘು ತಿಳಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಮುಂದೂಡಿಕೆಗೂ ಜಂಟಿ ಸದನ ಪರಿಶೀಲನಾ ಸಮಿತಿಗೂ ಸಂಬಂಧವಿಲ್ಲ:ಎಸ್.ರಘು
ಬೆಂಗಳೂರು: ಬಿಬಿಎಂಪಿ ಎಲೆಕ್ಷನ್ ಮುಂದೂಡಿಕೆ ಮಾಡುವುದಕ್ಕೂ ಇಂದಿನ ಜಂಟಿ ಸದನ ಪರಿಶೀಲನಾ ಸಮಿತಿ ಸಭೆಗೂ ಸಂಬಂಧ ಇಲ್ಲ ಎಂದು ಜಂಟಿ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷ ಎಸ್. ರಘು ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಮುಂದೂಡಿಕೆಗೂ ಜಂಟಿ ಸದನ ಪರಿಶೀಲನಾ ಸಮಿತಿಗೂ ಸಂಬಂಧವಿಲ್ಲ:ಎಸ್.ರಘು
ಒಂದು ವೇಳೆ ಹೈಕೋರ್ಟ್ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದರೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ನವಂಬರ್ 30ವರೆಗರ ಸಮಯವಿದೆ. ಅಷ್ಟರೊಳಗೆ ಜಂಟಿ ಸದನ ಪರಿಶೀಲನಾ ಸಮಿತಿ ಅಂತಿಮ ವರದಿ ಸಿದ್ಧವಾಗಲಿದೆ. ಏನೇ ಚುನಾವಣೆ ಪ್ರಕಟಣೆ ಆದರೂ ಮತದಾರರ ಪಟ್ಟಿ ಪರಿಷ್ಕರಣೆ ಸೇರಿ ಎಲ್ಲಾ ಪ್ರಕ್ರಿಯೆ ಪೂರ್ಣವಾಗಿ ಡಿಸೆಂಬರ್ ಒಂದಕ್ಕೆ ಚುನಾವಣೆ ದಿನಾಂಕ ನಿಗದಿಯಾಗುತ್ತದೆ. ನಮಗೆ 90 ದಿನ ಕಾಲಾವಕಾಶ ಇದೆ. ಅಷ್ಟರೊಳಗೆ ನಾವು ಈ ಕಾಯ್ದೆಯನ್ನು ತಂದೇ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
90 ದಿನಗಳಲ್ಲಿ ವರದಿ ನೀಡಬೇಕಾದರೆ ಈ ಪ್ರಕ್ರಿಯೆಗೆ ಚುರುಕು ನೀಡಬೇಕು. ಅದಕ್ಕಾಗಿ ನಾವು ಎರಡು ಉಪಸಮಿತಿಯನ್ನು ರಚಿಸಿದ್ದೇವೆ. ಎಲ್ಲಾ ಸಭೆಗಳನ್ನು ನಡೆಸಿ ಶೀಘ್ರವಾಗಿ ವರದಿಯನ್ನು ಸಿದ್ಧಗೊಳಿಸಲಿದ್ದೇವೆ. ಈಗಿರುವ ವಾರ್ಡ್ಗಳನ್ನೆ ವಿಂಗಡಿಸಿ, ಹೆಚ್ಚಿನ ವಾರ್ಡ್ಗಳನ್ನು ಮಾಡುತ್ತೇವೆ. ಹೊಸ ಪ್ರದೇಶವನ್ನು ಸೇರಿಸಿಕೊಳ್ಳಲ್ಲ. ಜನಸಂಖ್ಯೆ ಆಧಾರದಲ್ಲಿ ಹೊಸ ವಾರ್ಡ್ಗಳನ್ನು ಮರವಿಂಗಡನೆ ಮಾಡುತ್ತೇವೆ ಎಂದರು.