ಕರ್ನಾಟಕ

karnataka

ETV Bharat / city

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಬಗ್ಗೆ ಪೂರಕ ಮಾಹಿತಿ ಸಿಕ್ಕಿದೆ- ಸಂದೀಪ್ ಪಾಟೀಲ್ - ಇಂದ್ರಜಿತ್ ಲಂಕೇಶ್

ತಮ್ಮ ಬಳಿ ಇದ್ದ ಮಾಹಿತಿ ಹಂಚಿಕೊಂಡ ಇಂದ್ರಜಿತ್ ಲಂಕೇಶ್ ನಡೆ ಶ್ಲಾಘನೀಯ. ಇದೇ ರೀತಿ ಇತರರೂ ಮಾದಕ‌ ಜಾಲದ ಮಾಹಿತಿ ಇದ್ದಲ್ಲಿ ಸಿಸಿಬಿ‌ ಮುಂದೆ ಹಂಚಿಕೊಳ್ಳಿ..

CCB Joint Commissioner Sandeep Patil
ಸಂದೀಪ್ ಪಾಟೀಲ್

By

Published : Aug 31, 2020, 5:36 PM IST

ಬೆಂಗಳೂರು :ಸ್ಯಾಂಡಲ್​​ವುಡ್ ಡ್ರಗ್ಸ್‌ ಪ್ರಕರಣ ಸಂಬಂಧ ಇಂದ್ರಜಿತ್ ಲಂಕೇಶ್​ರ ವಿಚಾರಣೆ ಬಳಿಕ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣ ಸಂಬಂಧ ಇಂದ್ರಜಿತ್ ಲಂಕೇಶ್​​ಗೆ ನೋಟಿಸ್ ನೀಡಿದ್ದೆವು. ಹೀಗಾಗಿ ಇಂದು ಸಿಸಿಬಿ ಕಚೇರಿಗೆ ಇಂದ್ರಜಿತ್ ಬಂದು, ಡ್ರಗ್ಸ್‌​ ಮಾಫಿಯಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಸದ್ಯ ಅವರ ಹೇಳಿಕೆ ಮೇಲೆ ನಾವು ತನಿಖೆ ನಡೆಸುತ್ತೇವೆ.

ಈಗ ಇಂದ್ರಜಿತ್ ಹೇಳಿರುವ ಬಗ್ಗೆ ಏನೂ ಹೇಳಲು ಆಗಲ್ಲ. ಹಾಗೆಯೇ ಇಂದ್ರಜಿತ್​​ಗೆ ಮತ್ತೆ ನೋಟಿಸ್ ನೀಡಲ್ಲ. ನಮಗೆ ಬೇಕಾದ ಪೂರಕ ಮಾಹಿತಿ ಸಿಕ್ಕಿದೆ, ತನಿಖೆ ಕೈಗೊಳ್ಳುತ್ತೇವೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯೆ

ತಮ್ಮ ಬಳಿ ಇದ್ದ ಮಾಹಿತಿ ಹಂಚಿಕೊಂಡ ಇಂದ್ರಜಿತ್ ಲಂಕೇಶ್ ನಡೆ ಶ್ಲಾಘನೀಯ. ಇದೇ ರೀತಿ ಇತರರೂ ಮಾದಕ‌ ಜಾಲದ ಮಾಹಿತಿ ಇದ್ದಲ್ಲಿ ಸಿಸಿಬಿ‌ ಮುಂದೆ ಹಂಚಿಕೊಳ್ಳಿ. ಮಾದಕ‌ ಜಾಲದ ವಿರುದ್ಧದ ಹೋರಾಟದಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ ಎಂದು ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.

ABOUT THE AUTHOR

...view details