ಕರ್ನಾಟಕ

karnataka

ETV Bharat / city

ರೆಸಾರ್ಟ್​​ನಿಂದ ಅಧಿವೇಶನಕ್ಕೆ ತೆರಳಿದ ಜೆಡಿಎಸ್ ಶಾಸಕರು - undefined

ವಿಧಾನಸಭೆಯ ಅಧಿವೇಶನದಲ್ಲಿ ಭಾಗಿಯಾಗಲು ಜೆಡಿಎಸ್ ಶಾಸಕರು ರೆಸಾರ್ಟ್​ನಿಂದ ಖಾಸಗಿ ಬಸ್​ನಲ್ಲಿ ವಿಧಾನಸೌಧಕ್ಕೆ ತೆರಳಿದ್ದಾರೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್‌

By

Published : Jul 15, 2019, 9:21 AM IST

Updated : Jul 15, 2019, 11:45 AM IST

ಬೆಂಗಳೂರು:ಇಂದು ನಡೆಯಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಜೆಡಿಎಸ್ ಶಾಸಕರು ವಿಧಾನಸೌಧಕ್ಕೆ ಹೊರಟಿದ್ದಾರೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್‌ನಿಂದ ಈಗಾಗಲೇ ಬಸ್ಸಿನ ಮೂಲಕ ವಿಧಾನಸೌಧಕ್ಕೆ ಸಹಕಾರ ಸಚಿವ ಬಂಡಪ್ಪ ಕಾಶಂಪುರ್, ಎಂಎಸ್​ಸಿ ಶರವಣ ನೇತೃತ್ವದಲ್ಲಿ ಎಲ್ಲ ಶಾಸಕರು ತೆರಳಿದ್ದಾರೆ. ಶಾಸಕರ ಪ್ರಯಾಣಕ್ಕಾಗಿ ಕಳೆದ 7 ದಿನಗಳಿಂದ ರೆಸಾರ್ಟ್​ನಲ್ಲಿ ಬಸ್ ವ್ಯವಸ್ಥೆ ಇತ್ತು. ಶಾಸಕರಿಗಾಗಿಯೇ ಆ ಬಸ್​ ಅನ್ನು ಬುಕ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್‌ನಿಂದ ಹೊರಟ ಜೆಡಿಎಸ್​ ಶಾಸಕರು.

ಅಧಿವೇಶನದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ. ಸಿಎಂ ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರಗಳೇನು ಎಂಬುದರ ಮೇಲೆ ಜೆಡಿಎಸ್ ಶಾಸಕರು ರೆಸಾರ್ಟ್​ನಲ್ಲಿ ಇರಬೇಕೋ ಬೇಡವೋ ಅನ್ನೋದು ನಿರ್ಧಾರವಾಗಲಿದೆ. ಬಹುತೇಕ ಇಂದೇ ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಅಂತ್ಯವಾಗುತ್ತದೆ ಎನ್ನಲಾಗಿದ್ದು, ಸಿಎಂ ಕುಮಾರಸ್ವಾಮಿ ಭಾಷಣಕ್ಕಾಗಿ ಶಾಸಕರು ಎದುರು ನೋಡುತ್ತಿದ್ದಾರೆ.

Last Updated : Jul 15, 2019, 11:45 AM IST

For All Latest Updates

TAGGED:

ABOUT THE AUTHOR

...view details