ಕರ್ನಾಟಕ

karnataka

ETV Bharat / city

ಜಗದೀಶ್​ ಶೆಟ್ಟರ್​ ಗುಜರಾತ್ ಭೇಟಿ ಉದ್ದೇಶವಾದರೂ ಏನು? - Jagadish Shetter three days Gujarat tour

ಗುಜರಾತ್​ನಲ್ಲಿ ಮೋದಿಯವರ ಡ್ರೀಮ್ ಪ್ರಾಜೆಕ್ಟ್ ಡೊಲೆರೋ ಸಿಟಿ ಬಗೆಗಿನ ಅಧ್ಯಯನಕ್ಕಾಗಿ ಸಚಿವ ಜಗದೀಶ್‌ ಶೆಟ್ಟರ್‌ ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್‌ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

Jagadish Shetter three days Gujarat tour
ಮೂರು ದಿನಗಳ ಗುಜರಾತ್ ಪ್ರವಾಸಕ್ಕೆ ತೆರಳಿದ ಜಗದೀಶ್ ಶೆಟ್ಟರ್

By

Published : Jul 16, 2021, 2:09 PM IST

ಬೆಂಗಳೂರು: ಇನ್ವೆಸ್ಟ್ ಕರ್ನಾಟಕದ ಒಂದು ದಿನದ ಸಮಾವೇಶ ಮುಗಿಯುತ್ತಿದ್ದಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್‌ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ಗುಜರಾತ್​ನಲ್ಲಿ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್ ಡೊಲೆರೋ ಸಿಟಿ ಬಗ್ಗೆ ಅಧ್ಯಯನಕ್ಕೆ ಹೋಗಿದ್ದು, ಇದೊಂದು ದೇಶದಲ್ಲೇ ಕ್ರಾಂತಿ ಮಾಡುವ ಯೋಜನೆ ಎನ್ನುವ ಕಾರಣಕ್ಕಾಗಿ ಅಧ್ಯಯನ ನಡೆಸಲು ಸಚಿವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರವಾಸದ ಮೊದಲ ದಿನವಾದ ಇಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರನ್ನು ಭೇಟಿ ಮಾಡಿ, ಸೌಹಾರ್ದಯುತ ಮಾತುಕತೆ ನಡೆಸಿದರು

ಸಚಿವರ ನೇತೃತ್ವದ ತಂಡದಲ್ಲಿ ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್‌ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಾದ ರೇವಣ್ಣ ಗೌಡ, ಇನ್‌ವೆಸ್ಟ್‌ ಕರ್ನಾಟಕ ಫೋರ ನ ಸಿಓಓ ಬಿ.ಕೆ.ಶಿವಕುಮಾರ್‌, ಕೆಐಎಡಿಬಿ ಸಿಡಿಓ ಬಿ.ಕೆ ಪವಿತ್ರ, ಕಾರ್ಯನಿರ್ವಾಹಕ ಇಂಜಿನಿಯರ್‌ ಸಿ.ಸುನಿಲ್‌ ಇದ್ದಾರೆ.

ಇದನ್ನೂ ಓದಿ:ನಟ ದರ್ಶನ್​ರಿಂದ ಹಲ್ಲೆ ಆರೋಪ ಪ್ರಕರಣ: ಗಂಗಾಧರ್​ ಬಳಿ ಮಾಹಿತಿ ಪಡೆಯುತ್ತಿರೋ ಪೊಲೀಸರು‌!

ABOUT THE AUTHOR

...view details