ಕರ್ನಾಟಕ

karnataka

ETV Bharat / city

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರ್ತಿದ್ದಾಳೆ 'ಇವಳು ಸುಜಾತ' - Maja talkies

ಲೋಕೇಶ್ ಪ್ರೋಡಕ್ಷನ್ ತಂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇವಳು ಸುಜಾತಾ ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಯ ಮೇಲೆ ಬರಲಿದ್ದು, ಆಗಸ್ಟ್ 26 ರಿಂದ ಸಂಜೆ 5:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ.

ಇವಳು ಸುಜಾತ

By

Published : Aug 27, 2019, 8:59 AM IST

ಬೆಂಗಳೂರು: ಮಜಾ ಟಾಕೀಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಲೋಕೇಶ್ ಪ್ರೋಡಕ್ಷನ್ ತಂಡ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇವಳು ಸುಜಾತಾ ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಯ ಮೇಲೆ ಬರಲಿದ್ದಾರೆ.

ಇವಳು ಸುಜಾತಾ ಧಾರಾವಾಹಿ. ಕೃಪೆ : ಕಲರ್ಸ್ ಕನ್ನಡ

ಆಗಸ್ಟ್ 26 ರಿಂದ ಸಂಜೆ 5:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಇವಳು ಸುಜಾತ' ಧಾರಾವಾಹಿ ಆರಂಭವಾಗುತ್ತಿದೆ. ಈ ಹಿಂದೆ 'ಮಂಗಳೂರು ಹುಡುಗಿ, ಹುಬ್ಬಳ್ಳಿ ಹುಡುಗ' ಧಾರವಾಹಿ ನಿರ್ಮಿಸಿದ್ದ ಲೋಕೇಶ್ ಪ್ರೋಡಕ್ಷನ್ ಈ ಹೊಸ ಧಾರವಾಹಿಯನ್ನು ನಿರ್ಮಿಸುತ್ತಿದೆ. ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮೇಘಶ್ರೀ ಈ ಧಾರವಾಹಿಯಲ್ಲಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕನಟನಾಗಿ ಯಶ್ವಂತ್ ಕಾಣಿಸಿಕೊಂಡಿದ್ದಾರೆ.

ಇವಳು ಸುಜಾತಾ ಧಾರಾವಾಹಿ. ಕೃಪೆ : ಕಲರ್ಸ್ ಕನ್ನಡ

ಈಗಾಗಲೇ ಪ್ರೋಮೋ ಹೆಚ್ಚು ಜನರನ್ನು ಆಕರ್ಷಿಸಿದ್ದು, ಫ್ಯಾಮಿಲಿ ವೀಕ್ಷಕರನ್ನು ಸೆಳೆಯಲು ಸಿದ್ಧವಾಗಿದೆ. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ನಟಿ ಅಪರ್ಣ, ಮಂಡ್ಯರಮೇಶ್, ಲೋಕೇಶ್ ಹಾಗೂ ಜಗದೀಶ್ ಮಲ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 26 ಸಂಜೆ 5.30 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಇವಳು ಸುಜಾತ' ಧಾರಾವಾಹಿ ಪ್ರಸಾರವಾಗಲಿದೆ.

ಇವಳು ಸುಜಾತಾ ಧಾರಾವಾಹಿಯಲ್ಲಿ ಗಿರಿಜಾ ಲೊಕೇಶ್
ಇವಳು ಸುಜಾತಾ ಧಾರಾವಾಹಿ. ಕೃಪೆ : ಕಲರ್ಸ್ ಕನ್ನಡ

ABOUT THE AUTHOR

...view details