ಕರ್ನಾಟಕ

karnataka

ETV Bharat / city

ತೆರಿಗೆ ವಂಚನೆ ಶಂಕೆ: ಬೆಂಗಳೂರಲ್ಲಿ ಜೂಮ್ ಕಚೇರಿ ಮೇಲೆ ಐಟಿ ದಾಳಿ - ಉದ್ಯಮಿ ಗ್ರೇಗ್ ಮೋರನ್ ಒಡೆತನದ ಜೂಮ್ ಕಾರು ಕಂಪನಿ

ಉದ್ಯಮಿ ಗ್ರೇಗ್ ಮೋರನ್ ಒಡೆತನದ ಜೂಮ್ ಕಾರು ಕಂಪನಿಯು ತೆರಿಗೆ ವಂಚನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಜೀವನ್ ಭೀಮಾನಗರದ ಜೂಮ್ ಮುಖ್ಯ ಕಚೇರಿ ಹಾಗೂ ದೊಮ್ಮಲೂರು ಬಳಿ ಇರುವ ಜೂಮ್ ಕಾರು ಕೇಂದ್ರ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಜೂಮ್ ಕಚೇರಿ ಮೇಲೆ ಐಟಿ ದಾಳಿ

By

Published : Sep 26, 2019, 11:16 AM IST

ಬೆಂಗಳೂರು: ತೆರಿಗೆ ವಂಚನೆ ಶಂಕೆ ಹಿನ್ನೆಲೆ ಜೂಮ್ ಕಾರು ಕೇಂದ್ರ ಕಚೇರಿ ಮೇಲೆ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದೆ.

2013ರಲ್ಲಿ ಆರಂಭವಾಗಿದ್ದ ಉದ್ಯಮಿ ಗ್ರೇಗ್ ಮೋರನ್ ಒಡೆತನದ ಜೂಮ್ ಕಾರು ಕಂಪನಿ, ಕಾರುಗಳನ್ನ ಬಾಡಿಗೆಗೆ ನೀಡುತ್ತಿದ್ದು, ಬೆಂಗಳೂರು, ಮೈಸೂರು ಮಂಗಳೂರು, ಮುಂಬೈ, ಕೋಲ್ಕತ್ತಾ, ಸೂರತ್ ಸೇರಿದಂತೆ 45 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಂಪನಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ಹೇಳಲಾಗ್ತಿದೆ.

ಜೂಮ್ ಕಚೇರಿ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಜೀವನ್ ಭೀಮಾ ನಗರದ ಜೂಮ್ ಮುಖ್ಯ ಕಚೇರಿ ಹಾಗೂ ದೊಮ್ಮಲೂರು ಬಳಿ ಇರುವ ಜೂಮ್ ಕಾರು ಕೇಂದ್ರ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ABOUT THE AUTHOR

...view details