ಕರ್ನಾಟಕ

karnataka

ETV Bharat / city

ಒಪ್ಟೊ ಸರ್ಕ್ಯೂಟ್ ಕಂಪೆನಿ ವಿರುದ್ಧ ಕೇಸು ದಾಖಲು​: ಆರೋಪಿಗಳ ಮನೆ ಮೇಲೆ ಐಟಿ ದಾಳಿ - it raid on opto circut company

ಒಪ್ಟೊ ಸರ್ಕ್ಯೂಟ್ ಕಂಪೆನಿಯು ಎಸ್​ಬಿಐ ಹಾಗು ಸಿಂಗಾಪುರದ ಡಿಬಿಎಸ್ ಬ್ಯಾಂಕ್​ನಿಂದ 500 ಕೋಟಿ ರೂಗೂ ಅಧಿಕ ಮೊತ್ತದ ಸಾಲ ಪಡೆದು ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಒಪ್ಟೊ ಸರ್ಕ್ಯೂಟ್ ಕಂಪೆನಿ ವಿರುದ್ಧ ಎಫ್​ಐಆರ್​ ಬೆನ್ನೆಲೇ..ಆರೋಪಿಗಳ ಮನೆ ಮೇಲೆ ಐಟಿ ದಾಳಿ

By

Published : Nov 6, 2019, 3:49 PM IST

ಬೆಂಗಳೂರು:ಒಪ್ಟೊ ಸರ್ಕ್ಯೂಟ್ ಕಂಪೆನಿ ಎಸ್​ಬಿಐ ಹಾಗು ಸಿಂಗಾಪುರದ ಡಿಬಿಎಸ್ ಬ್ಯಾಂಕ್​ನಿಂದ 500 ಕೋಟಿ ರೂಗೂ ಅಧಿಕ ಮೊತ್ತದ ಸಾಲ ಪಡೆದು ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಒಪ್ಟೊ ಸರ್ಕ್ಯೂಟ್ ಕಂಪೆನಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.​
ಒಪ್ಟೊ ಸರ್ಕ್ಯೂಟ್ ಕಂಪೆನಿಯ ಮಾಲೀಕರು ಎಸ್​ಬಿಐ ಬ್ಯಾಂಕ್​ಗೆ 354 ಕೋಟಿ ರೂ. ಹಾಗೂ ಸಿಂಗಾಪುರದ ಡಿಬಿಎಸ್ ಬ್ಯಾಂಕ್​ಗೆ 178 ಕೋಟಿ ರೂ.ವಂಚಿಸಿದೆ ಎನ್ನಲಾಗಿದೆ. ಹೀಗಾಗಿ ಸಿಬಿಐ ಅಧಿಕಾರಿಗಳು ಹಲಸೂರು ಠಾಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಐಟಿ ಇಲಾಖೆಗೆ ಮಾಹಿತಿ ರವಾನಿಸಿದ್ದರು.

ಸಿಬಿಐ ಮಾಹಿತಿ ಮೇರೆಗೆ ಐಟಿ ಇಲಾಖೆ ಅಧಿಕಾರಿಗಳು ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳಾದ ವಿನೋದ್ ರಾಮ್ನಾಣಿ, ಉಷಾ ರಾಮ್ನಾಣಿ, ಜೋಯಶ್ ಪಟೇಲ್ ಹಾಗು ಥಾಮಸ್ ಸೇರಿ 6 ಮಂದಿಯ ಮನೆ ಮೇಲೆ ‌ ದಾಳಿ ನಡೆಸಿದ್ದು ದಾಖಲೆಗಳ ಶೋಧಕಾರ್ಯ ನಡೆಸುತ್ತಿದೆ.

ABOUT THE AUTHOR

...view details