ಬೆಂಗಳೂರು: ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಅಕೌಟೆಂಟ್ ನಾರಾಯಣಗೌಡ ಬಿ. ಪಾಟೀಲ್ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆಯು, ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.
ರಾಮೀಣಾಭಿವೃದ್ಧಿ ಅಕೌಟೆಂಟ್ ನಾರಾಯಣಗೌಡ ಬಿ. ಪಾಟೀಲ್ ವಿಚಾರಣೆಗೆ ಐಟಿ ನೋಟೀಸ್ ನಿನ್ನೆ ಬೆಂಗಳೂರಿನ ರಾಜಮಹಲ್ ಹೊಟೇಲ್ ಕೊಠಡಿ ಹಾಗೂ ಹಾವೇರಿ ಮನೆ ಮೇಲೆ ಐಟಿ ದಾಳಿ ಮಾಡಿತ್ತು. ಐಟಿ ಆ್ಯಕ್ಟ್ 142 (1)) ಹಾಗೂ 143 (2) ಆಡಿಯಲ್ಲಿ ನೊಟೀಸ್ ಜಾರಿ ಮಾಡಿದೆ.
ದಾಳಿ ವೇಳೆ ನಾರಾಯಣಗೌಡ ಪಾಟೀಲ್ ಗೈರಾಗಿದ್ದರು. ಆ ಸಂದರ್ಭದಲ್ಲಿ ನಾರಾಯಣಗೌಡರ ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.
ಸದ್ಯ ವಿಚಾರಣೆಗೆ ಹಾಜರಾಗುವಂತೆ ನಾರಾಯಣ ಗೌಡ ಪಾಟೀಲ್ಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಹಾಜರಾಗದೇ ಇದ್ದರೆ ನ್ಯಾಯಾಲಯದ ಅನುಮತಿ ಪಡೆದು ಆರೆಸ್ಟ್ ವಾರೆಂಟ್ ಜಾರಿ ಮಾಡುವ ಸಾಧ್ಯತೆಯಿದೆ.