ಕರ್ನಾಟಕ

karnataka

ETV Bharat / city

ಐಟಿ ದಾಳಿ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪರಮೇಶ್ವರ್​​​​ ಆಪ್ತರಿಗೆ ನೋಟಿಸ್​​​ - IT attack case

ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರ ಆಪ್ತರಿಗೆ ಇಂದು ಕ್ವೀನ್ಸ್ ರಸ್ತೆಯ ಐಟಿ ಮುಖ್ಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.

ಪರಮೇಶ್ವರ್

By

Published : Oct 14, 2019, 9:59 AM IST

ಬೆಂಗಳೂರು: ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರ ಆಪ್ತರಿಗೆ ಇಂದು ಕ್ವೀನ್ಸ್ ರಸ್ತೆಯ ಐಟಿ ಮುಖ್ಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ..

ಆರ್.ಎಲ್.ಜಾಲಪ್ಪರ ಪುತ್ರ ರಾಜೇಂದ್ರ, ಹಾಗೆಯೇ ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಮಗ ಆನಂದ್ ಮತ್ತು ಶಿಕ್ಷಣ ಸಂಸ್ಥೆಗಳ ಮಾಲೀಕರು, ಸಂಬಂಧಿಕರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಮೆಡಿಕಲ್ ಸೀಟ್​ ಹಂಚಿಕೆಯಲ್ಲಿ ಹಗರಣ ನಡೆದಿರುವ ಶಂಕೆ ಹಿನ್ನೆಲೆ ಪರಮೇಶ್ವರ್​ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಇದೇ ತಿಂಗಳ 10ರಂದು ದಾಳಿ ನಡೆಸಿ, ಸತತ ಮೂರು ದಿನಗಳ ಕಾಲ ಶೋಧ ನಡೆಸಿದ್ದರು.

ABOUT THE AUTHOR

...view details