ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆ ಐಟಿ ಬಿಟಿ ಕಂಪನಿಗಳ ತಾಣ, ಒಂದು ವರ್ಷಕ್ಕಿಂತ ಮೇಲೆ ವರ್ಕ್ ಫ್ರಮ್ ಹೋಮ್ ಆಧಾರದಲ್ಲಿ ನಡೆಯುತ್ತಿರುವ ಈ ಸಂಸ್ಥೆಗಳು ಇನ್ನು ಜುಲೈ ತಿಂಗಳಲ್ಲಿ ತೆರೆಯಬೇಕಾಗಿದ್ದು, ಈಗ ವರ್ಷವೂ ಬಾಗಿಲು ತೆರೆಯುವ ಯಾವುದೇ ಲಕ್ಷಣ ಇನ್ನೂ ಕಂಡಿಲ್ಲ.
ಅನೇಕ ಉದ್ಯಮಗಳು ಐಟಿ- ಬಿಟಿ ಸಂಸ್ಥೆಗಳನ್ನ ನಂಬಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದವು. ಆದರೆ ಕಳೆದ ಒಂದು ವರ್ಷದಿಂದ ಹೋಟೆಲ್, ಟ್ಯಾಕ್ಸಿ ಹಾಗೂ ಇನ್ನಿತರೆ ಸೇವೆಗಳು ಪೂರ್ಣವಾಗಿ ಸ್ಥಗಿತಗೊಂಡಿವೆ.
ಐಟಿ- ಬಿಟಿ ಸಂಸ್ಥೆಗಳಲ್ಲಿ ಲಸಿಕೆ ಅಭಿಯಾನ
ಕೋವಿಡ್ ಹೆಮ್ಮಾರಿ ವಿರುದ್ಧ ಸಮರ ಸಾರಲು ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ತಿಂಗಳಿಂದ ಸಂಸ್ಥೆಯ ನೌಕರರಿಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಿಂದ ನೌಕರರು ಕೋವಿಡ್ನಿಂದ ಸುರಕ್ಷತೆ ಕಾಪಾಡಿಕೊಳ್ಳುತ್ತಾರೆ ಹಾಗೂ ದೇಶದಲ್ಲಿ ಕೋವಿಡ್ ನಿಯಂತ್ರಣ ಸಾಧಿಸಲು ಸಾಧ್ಯ ಎಂದು ಬೌನ್ಸ್ ಸಂಸ್ಥೆ ಸಹ ಸ್ಥಾಪಕ ವಿವೇಕಾನಂದ ಹೇಳಿದ್ದಾರೆ.