ಕರ್ನಾಟಕ

karnataka

ETV Bharat / city

ಸಮನ್ವಯತೆ ಕೊರತೆ: ಹೊಸ ವರ್ಷದಲ್ಲಿ ಚುರುಕು ಪಡೆಯುತ್ತಿವೆಯೇ ಕಾಮಗಾರಿಗಳು? - ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೆ, ರಸ್ತೆ ಅಭಿವೃದ್ಧಿಗೆ ಮೊದಲು ಫುಟ್​​ಪಾತ್ ಜಾಗದಲ್ಲಿ ಜಲಮಂಡಳಿ ಕೆಲಸ, ಟ್ರಾಫಿಕ್ ನಿರ್ವಹಣೆ, ಬೆಸ್ಕಾಂ ಸಂಪರ್ಕಗಳ ಬದಲಾವಣೆ ಮಾಡಿಕೊಟ್ಟ ಬಳಿಕ ಬಿಬಿಎಂಪಿ ರಸ್ತೆ ಕಾಮಗಾರಿ ನಡೆಸುತ್ತದೆ. ಈ ಬಗ್ಗೆ ಜವಾಬ್ದಾರಿ ಹಂಚಿಕೆ ಹಾಗೂ ಕೆಲಸಗಳನ್ನು ಗಡುವಿನೊಳಗೆ ಮುಗಿಸಲು ಸಮನ್ವಯ ಸಮಿತಿಯ ಸಭೆ ಸಹಕಾರಿಯಾಗಿದೆ.

Is there coordination between the different departments of the municipal corporation?
ಸಮನ್ವಯತೆ ಸಮಸ್ಯೆ

By

Published : Dec 31, 2020, 10:12 PM IST

ಬೆಂಗಳೂರು:ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ನಗರ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲು ವಿಪುಲ ಅವಕಾಶಗಳಿವೆ. ಆದರೆ, ಇಂದಿಗೂ ರಸ್ತೆ, ವಿದ್ಯುತ್ ದೀಪ, ಚರಂಡಿ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಸಣ್ಣಪುಟ್ಟ ಕೆಲಸಗಳಲ್ಲಿ ಕುಂದು - ಕೊರತೆ ಎದುರಿಸುತ್ತಿದೆ. ಸ್ಥಳೀಯ ಸಂಸ್ಥೆಗಳ ನಡುವೆ ಹೊಂದಾಣಿಕೆ ಕೊರತೆಯೇ ಅದಕ್ಕೆ ಪ್ರಮುಖ ಕಾರಣ.

ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಟ್ರಾಫಿಕ್ ಪೊಲೀಸ್ ವಿಭಾಗದ ನಡುವೆ ಆಡಳಿತಾತ್ಮಕ ಹೊಂದಾಣಿಕೆ ಅಥವಾ ಸಮನ್ವಯ ತರಲು ವ್ಯವಸ್ಥೆ ರೂಪಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಬೆಂಗಳೂರಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಿಎಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಹೀಗಾಗಿ, ಇನ್ನು ಮುಂದಿನ ಕಾಮಗಾರಿಗಳು ಮುಖ್ಯಮಂತ್ರಿಯಿಂದಲೇ ಪ್ರಗತಿ ಪರಿಶೀಲನೆಗೆ ಒಳಪಡಲಿವೆ. ಇದರಿಂದ ಆಮೆಗತಿಯಲ್ಲಿರುವ ಕಾಮಗಾರಿಗಳು ಚುರುಕು ಪಡೆಯುವ ಸಾಧ್ಯತೆ ಇದೆ.

ವಿವಿಧ ಇಲಾಖೆಗಳಲ್ಲಿ ಸಮನ್ವಯತೆ ಕುರಿತು ವರದಿ

ಪಾಲಿಕೆ ಹೊಸ ರಸ್ತೆ ನಿರ್ಮಿಸಿ ಕೋಟ್ಯಂತರ ವೆಚ್ಚದ ಡಾಂಬರೀಕರಣ ಮಾಡಿದ ಬಳಿಕ ಒಂದೆರಡೇ ವಾರದಲ್ಲಿ ಅದನ್ನು ಕಿತ್ತು ಪೈಪ್​ಲೈನ್ ಅಳವಡಿಸುವ ಕೆಲಸ ಜಲಮಂಡಳಿ ಮಾಡುತ್ತಿತ್ತು. ಅಥವಾ ಬೆಸ್ಕಾಂ ವಿದ್ಯುತ್​ಗೆ ಸಂಬಂಧಿಸಿದ ಕೆಲಸಕ್ಕಾಗಿ ನೆಲ ಅಗೆಯುತ್ತಿತ್ತು. ಇದರಿಂದ ಕೊಟ್ಯಂತರ ರೂಪಾಯಿ ನೀರು ಪಾಲಾಗುತ್ತಿತ್ತು. ಸರ್ಕಾರದ ಹಂತದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಜಲಮಂಡಳಿ ರಸ್ತೆ ಅಗೆದರೂ ಅದನ್ನು ಪಾಲಿಕೆಯೇ ದುರಸ್ತಿಪಡಿಸಬೇಕು. ಜಲಮಂಡಳಿ ಅದರ ವೆಚ್ಚ ಭರಿಸಲಿದೆ ಎಂದು ಸೂಚಿಸಲಾಗಿತ್ತು. ಆದರೆ, ಜಲಮಂಡಳಿ ಹಣ ನೀಡದೆ ಬಾಕಿ ಉಳಿಸಿಕೊಂಡಿದ್ದು, ಬಿಬಿಎಂಪಿಯೇ ವೆಚ್ಚ ಭರಿಸುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ದೂರಿದ್ದಾರೆ.

ರಾಜ್ಯದ 2ನೇ ದೊಡ್ಡ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕೊಂಚ ವಿಭಿನ್ನವಾಗಿದೆ. ಎಲ್ಲಾ ಇಲಾಖೆಗಳನ್ನು ಅಭಿವೃದ್ಧಿಯ ಕೊಂಡಿಯಂತೆ ಬಳಸಿಕೊಂಡಿದ್ದು, ನಗರ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಪಾಲಿಕೆಯು ಕಂಟ್ರೋಲ್ ರೂಮ್​​ ಅನ್ನು ತೆರೆದಿದೆ. ಅದಕ್ಕೆ ಬರುವ ದೂರುಗಳನ್ನು ಆಯಾ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಸಮಸ್ಯೆ ಬಗೆಹರಿದ ತಕ್ಷಣವೇ ದೂರುದಾರರಿಗೆ ಸಂದೇಶ ಕಳುಹಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳ ನಡುವೆ ಸಮನ್ವಯತೆ ಕೊರತೆ ಕಂಡು ಬಂದರೆ ಹಳ್ಳಿ ಮತ್ತು ನಗರಗಳು ಅಭಿವೃದ್ಧಿಯಿಂದ ದೂರ ಸರಿಯಲಿವೆ. ಹೀಗಾಗಿ, ಸರ್ಕಾರ ಅದರ ಪರಿಹಾರಕ್ಕೆ ಮುಂದಾಗಬೇಕಿದೆ.

ABOUT THE AUTHOR

...view details