ಕರ್ನಾಟಕ

karnataka

ಹಣ್ಣು- ತರಕಾರಿ ಬೆಳೆದು ರೈತನಾದ ಐಪಿಎಸ್​​​​ ಶಶಿಕುಮಾರ್: ವಿಡಿಯೋ ವೈರಲ್​​​

By

Published : Jun 3, 2020, 12:45 PM IST

Updated : Jun 3, 2020, 1:31 PM IST

ಕರ್ತವ್ಯದ ನಡುವೆಯೂ ಬಿಡುವಿನ ಸಮಯದಲ್ಲಿ ಹಣ್ಣು- ತರಕಾರಿ ಬೆಳೆದಿರುವ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್​ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

IPS Shashikumar
ಐಪಿಎಸ್ ಶಶಿಕುಮಾರ್

ಬೆಂಗಳೂರು:ಲಾಕ್​​​​ಡೌನ್​​ನಿಂದ ಸದಾ ಕೆಲಸದಲ್ಲಿ ನಿರತರಾಗಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್​ ಅವರು, ಸಿಕ್ಕ ಅಲ್ಪಸ್ವಲ್ಪ ಸಮಯದಲ್ಲಿ ಮನೆಯ ಆವರಣವನ್ನು ತರಕಾರಿ ತೋಟವನ್ನಾಗಿಸಿ ಮಾದರಿಯಾಗಿದ್ದಾರೆ.

ತರಕಾರಿ ತೋಟ ಬೆಳೆದಿರುವ ಕುರಿತ ವಿಡಿಯೋವನ್ನು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಹಂಚಿ ಕೊಂಡಿರುವ ಅವರು, ಒತ್ತಡದ ಬದುಕಿನಿಂದ ಹೊರಬರಲು ಇದು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಮನೆಗೆ ನಿತ್ಯ ತರಕಾರಿಗಳು ಅವಶ್ಯಕತೆ ಇರುತ್ತದೆ. ನಾವು ಒತ್ತಡದಲ್ಲಿ ಕೆಲಸ ಮಾಡುತ್ತೇವೆ. ಕರ್ತವ್ಯ ಮುಗಿಸಿ ಮನೆಗೆ ಆಗಮಿಸಿ ಏನಾದರೂ ಕೆಲಸ ಮಾಡಿದರೆ ಮನಸ್ಸು ನಿರಾಳವಾಗುತ್ತದೆ ಎಂದು ಹೇಳಿದ ಡಿಸಿಪಿ, ಮನೆಯಲ್ಲಿ ಬೆಳೆದ ಹೂ, ಹಣ್ಣು ತರಕಾರಿಗಳ ಹೆಸರನ್ನು ವಿವರಣೆ ನೀಡಿದ್ದಾರೆ. ಕರ್ತವ್ಯದ ನಡುವೆಯೂ ಬಿಡುವಿನ ಸಮಯದಲ್ಲಿ ಹಣ್ಣು-ತರಕಾರಿ ಬೆಳೆದಿರುವ ಕಾರ್ಯಕ್ಕೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ.

Last Updated : Jun 3, 2020, 1:31 PM IST

ABOUT THE AUTHOR

...view details