ಬೆಂಗಳೂರು:ಐಪಿಎಸ್ ಅಧಿಕಾರಿ ಡಿ.ರೂಪ ಹಾಗೂ ಅವರ ಪತಿ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಹೋಂ ಕ್ವಾರಂಟೈನ್‌ನಲ್ಲಿ ಮೌನೀಶ್ ಮೌದ್ಗಿಲ್ ಕರ್ತವ್ಯ: ಪತಿ ಬಗ್ಗೆ ಐಜಿಪಿ ಡಿ.ರೂಪ ಮೆಚ್ಚುಗೆ
"ಮನೆಯಲ್ಲಿದ್ದು Quarantine ಆಗಿ ಬೆಂಗಳೂರು ದಕ್ಷಿಣ ಝೋನ್ Covid-19 ಜವಾಬ್ದಾರಿ ವಹಿಸಿ ಬೆಳಗ್ಗಿನಿಂದ ಸೂಚನೆ ನೀಡುತ್ತಾ, ಪಾಲನೆ ವರದಿ ಗಮನಿಸುತ್ತಾ Sector officers, health staff ಜೊತೆಯಲ್ಲಿ video conference ಮೂಲಕ ಕಾರ್ಯ ನಿರ್ವಹಿಸುವ ಮುನೀಶ್ ಮೌದ್ಗಿಲ್." ಎಂದು ಐಪಿಎಸ್ ಅಧಿಕಾರಿ ಡಿ.ರೂಪ, ತಮ್ಮ ಪತಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸದ್ಯ ಡಿ.ರೂಪ ಅವರ ಪತಿ ಮುನೀಶ್ ಮೌದ್ಗಿಲ್ ಹೋಂ ಕ್ವಾರಂಟೈನ್ ಆಗಿದ್ದು, ಅವರ ಆರೋಗ್ಯ ಹಾಗೂ ಕೆಲಸದ ಬಗ್ಗೆ ಡಿ.ರೂಪಾ ಅವರು ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ಕೋವಿಡ್ ಕಂಟ್ರೋಲ್ ರೂಂನ ಉಸ್ತುವಾರಿ ಅಧಿಕಾರಿಯಾಗಿದ್ದ ಮುನೀಶ್ ಮೌದ್ಗಿಲ್, ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ರು. ಆದರೆ ಬಿಬಿಎಂಪಿ ದಕ್ಷಿಣ ವಿಭಾಗದ ಆರೋಗ್ಯ ಅಧಿಕಾರಿ ಹಾಗೂ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಮಾದ್ಗಿಲ್ ಸದ್ಯ ಹೋಂ ಕ್ವಾರಂಟೈನ್ ಆಗಿದ್ದಾರೆ. ಹೀಗಾಗಿ ಇವರು ಮನೆಯಲ್ಲೇ ಇದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ.