ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭಾರತೀಯ ರೈಲ್ವೆ ಇಲಾಖೆ ಸೇವೆಗಳನ್ನ ಸ್ಥಗಿತಗೊಳಿಸಿದೆ. ಇದರ ಬೆನ್ನೆಲ್ಲೇ ಅಂತಾರಾಜ್ಯ ಸಾರಿಗೆ ಸೇವೆ ಕೂಡ ಸ್ಥಗಿತಗೊಳ್ಳಲಿದೆ.
ಕೊರೊನಾ ಭೀತಿ: ಮಾರ್ಚ್ 31ರವರೆಗೆ ಅಂತಾರಾಜ್ಯ ಸಾರಿಗೆ ಸಂಚಾರ ಸ್ಥಗಿತ
1076 ಅಂತಾರಾಜ್ಯ ಬಸ್ ಸಂಚಾರ ಸ್ಥಗಿತವಾಗಲಿದ್ದು, ನಾಳೆಯಿಂದ ಮಾರ್ಚ್ 31 ವರೆಗೆ ಅತಾರಾಜ್ಯ ಸಾರಿಗೆ ಸೇವೆ ಸಹ ಸ್ತಬ್ಧವಾಗಲಿದೆ.
ನಾಳೆಯಿಂದ ಮಾರ್ಚ್ 31ರವರೆಗೂ ಅಂತಾರಾಜ್ಯ ಸಾರಿಗೆ ಸೇವೆ ಸ್ಥಗಿತವಾಗಲಿದೆ. ಆಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ 1,076 ಬಸ್ಗಳ ಸಂಚಾರ ಇರುವುದಿಲ್ಲ.
ನಿಗಮದ ವೇಗಧೂತ ಹಾಗೂ ರಾಜಹಂಸ ಬಸ್ಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪಡೆಯಲಾಗುವ ವ್ಯವಸ್ಥೆಯನ್ನು (COVID-19 ಸೋಂಕಿತ ಪ್ರಯಾಣಿಕರು ಬಸ್ನಲ್ಲಿ ಪ್ರಯಾಣಿಸಿದ ಸಮಯದಲ್ಲಿ ಇತರೆ ಪ್ರಯಾಣಿಕರು ಮಾಹಿತಿ ಲಭ್ಯವಿರದ ಕಾರಣದಿಂದ) ಈಗಿನಿಂದಲೇ ಮುಂದಿನ ಆದೇಶದವರೆಗೆ ಪ್ರಾರಂಭಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.