ಕರ್ನಾಟಕ

karnataka

ETV Bharat / city

ಕಾರ್ಮಿಕರ ದಿನ: ಶುಭ ಕೋರಿದ ಸಿಎಂ ಬೊಮ್ಮಾಯಿ, ಬಿಎಸ್​​ವೈ - ಅಂತಾರಾಷ್ಟ್ರೀಯ ಕಾರ್ಮಿಕರ ದಿನ 2022

ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ಅನಂತ ನಮನಗಳು- ಸಿಎಂ ಬೊಮ್ಮಾಯಿ ಟ್ವೀಟ್

CM Bommai, former CM BSY
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​​ವೈ

By

Published : May 1, 2022, 11:40 AM IST

ಬೆಂಗಳೂರು: ರಾಜ್ಯದ ಸಮಸ್ತ ಕಾರ್ಮಿಕ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕಾರ್ಮಿಕ ದಿನದ ಶುಭಾಶಯ ಕೋರಿದ್ದಾರೆ.

'ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿರುವ ವರ್ಗವೆಂದರೆ ಅದು ಕಾರ್ಮಿಕ ವರ್ಗ. ಅವರ ಪರಿಶ್ರಮ ಮತ್ತು ಬದ್ದತೆ ಅವಿಸ್ಮರಣೀಯ. ಕಾರ್ಮಿಕ ದಿನಾಚರಣೆಯ ಈ ಸಂದರ್ಭದಲ್ಲಿ ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ನನ್ನ ಅನಂತ ನಮನಗಳು' ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

'ದೇಶದ ಪ್ರಗತಿಯ ಕಾಯಕದಲ್ಲಿ ಕಾರ್ಮಿಕರ ಕೊಡುಗೆ ಅತ್ಯಮೂಲ್ಯವಾದದ್ದು. ಕಾರ್ಮಿಕರ ಪರಿಶ್ರಮ, ಕಾಯಕನಿಷ್ಠೆಗಳಿಗೆ ರಾಷ್ಟ್ರ ಸದಾ ಆಭಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರ ಕಟ್ಟುವ ಕಾಯಕದಿ ಹಗಲಿರುಳೆನ್ನದೆ ದುಡಿಯುತ್ತಿರುವ ಎಲ್ಲ ವರ್ಗದ ಶ್ರಮಜೀವಿಗಳಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಅವರೆಲ್ಲರ ಪರಿಶ್ರಮಕ್ಕೆ ನನ್ನ ಅನಂತಾನಂತ ನಮನಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಇದನ್ನೂ ಓದಿ:ನಾನು ಸ್ಟ್ರಾಂಗ್ ಆಗಿ ಆಡಳಿತ ನಡೆಸಿದ್ರೆ ಡಿಕೆಶಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ತಿರುಗೇಟು

ABOUT THE AUTHOR

...view details