ಬೆಂಗಳೂರು:ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಲು ಮೈತ್ರಿಯಲ್ಲಿನ ಒಳಜಗಳವೇ ಕಾರಣ ಎಂದು ಜೆಡಿಯಸ್ ಮುಖಂಡ ಬಿ ಎಂ ಫಾರೂಕ್ ಹೇಳಿದ್ದಾರೆ.
ಜೆಡಿಎಸ್ ಈ ಸ್ಥಿತಿಗೆ ಮೈತ್ರಿ ಒಳಜಗಳವೇ ಕಾರಣ ಎಂದ್ರು ಜೆಡಿಎಸ್ನ ಈ ನಾಯಕ - undefined
ಲೋಕ ಸಮರದ ಫಲಿತಾಂಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆದ್ದು ಬೀಗಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, 25 ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಇನ್ನು ಈ ಹಿನ್ನಡೆಗೆ ಒಂದು ರೀತಿಯಲ್ಲಿ ಮೈತ್ರಿಯಲ್ಲಿನ ಒಳಜಗಳವೇ ಕಾರಣ ಎಂದು ಜೆಡಿಎಸ್ ಮುಖಂಡ ಬಿ ಎಂ ಫಾರೂಕ್ ಹೇಳಿದ್ದಾರೆ.

ಬಿ ಎಂ ಫಾರೂಕ್
ಇನ್ನು ಮುಖ್ಯವಾಗಿ ಬಿಜೆಪಿಯ ಈ ಮುನ್ನಡೆಗೆ ಪುಲ್ವಾಮ ಹಾಗೂ ಬಾಲಾಕೋಟ್ ದಾಳಿ ಕಾರಣ. ಉತ್ತರದ ಹಿಂದಿ ರಾಜ್ಯಗಳಲ್ಲಿ ಈ ದಾಳಿ ತುಂಬಾ ಪ್ರಭಾವ ಬೀರಿದೆ ಎಂದಿದ್ದಾರೆ.
ಜೆಡಿಎಸ್ನ ನಾಯಕ ಬಿ ಎಂ ಫಾರೂಕ್
ಫಲಿತಾಂಶದಲ್ಲಿ ರಾಜ್ಯ ಸೇರಿದಂತೆ ದೇಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆದ್ದು ಬೀಗಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.