ಬೆಂಗಳೂರು:ಡಿಜೆಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ಸದ್ಯ ಪೊಲೀಸರಿಗೆ ತಲೆನೋವಾಗಿದ್ದಾರೆ. ತನಿಖಾಧಿಕಾಧಿಕಾರಿಗಳ ದಾರಿ ತಪ್ಪಿಸಲು 13 ಆರೋಪಿಗಳುನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಅದರಲ್ಲಿ 9 ಜನರ ಅರ್ಜಿ ತಿರಸ್ಕೃತವಾಗಿವೆ.
ತನಿಖಾಧಿಕಾರಿಗಳ ದಿಕ್ಕು ತಪ್ಪಿಸೋದಕ್ಕೆ ಮಾಸ್ಟರ್ ಪ್ಲಾನ್ :ಗಲಭೆ ನಡೆಯುವ ಮುಂಚೆಯೇ ಪ್ಲಾನ್ ಮಾಡಿದ್ದ ಆರೋಪಿಗಳು ಕುಟುಂಬಸ್ಥರನ್ನ ಮುಂದೆ ಬಿಡಲು ನಿರ್ಧರಿಸಿದ್ದರು. ಹೀಗಾಗಿ, ತನಿಖಾಧಿಕಾರಿಗಳಿಗೆ ಕಾನೂನಿನ ಮೂಲಕ ಅಡ್ಡಿಪಡಿಸುವ ತಂತ್ರ ಮಾಡಿ ನ್ಯಾಯಾಲಯ, ಮಾನವ ಹಕ್ಕು ಆಯೋಗ, ಮಹಿಳಾ ಆಯೋಗದ ಮೊರೆ ಹೋಗಿ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಇದಕ್ಕೆ ಸರಿಯಾಗಿ ಠಕ್ಕರ್ ಕೊಡೋಕೆ ಮುಂದಾದ ಸಿಸಿಬಿ ಪೊಲೀಸರು ಪ್ರಸ್ತುತ ನಾಲ್ಕು ಟೀಂ ರೆಡಿ ಮಾಡಿದ್ದಾರೆ. ಒಂದು ಟೀಂ ನ್ಯಾಯಾಲಯ, ಮತ್ತೊಂದು ಟೀಂ ಮಾನವ ಹಕ್ಕುಗಳ ಆಯೋಗ, ಮಗದೊಂದು ಟೀಂ ಮಹಿಳಾ ಆಯೋಗ, ಇನ್ನೊಂದು ಟೀಂ ಹೈಕೋರ್ಟ್ನ ಕೆಲಸ ನಿರ್ವಹಣೆ ಮಾಡ್ತಿದೆ.