ಬೆಂಗಳೂರು: ಸದಾ ಜನ ಸಾಮಾನ್ಯರ ನೋವಿಗೆ ಸ್ಪಂದಿಸುತ್ತ ಬಂದಿರುವ ಇನ್ಫೋಸಿಸ್ ಫೌಂಡೇಶನ್, ಸದ್ಯ ಲಾಕ್ಡೌನ್ನಿಂದಾಗಿ ಕಳೆದ 26 ದಿನಗಳಿಂದ ಕೆಲಸ ಇಲ್ಲದೆ ಮನೆಯಲ್ಲಿರುವ ಚಿತ್ರರಂಗದ 3700 ಸಿನಿ ಕಾರ್ಮಿಕರಿಗೆ ದಿನಸಿ ಕಿಟ್ ನೀಡುವ ಮೂಲಕ ಮಾನವೀಯತೆ ತೋರಿದೆ.
ಸಿನಿ ಕಾರ್ಮಿಕರ ನೆರವಿಗೆ ಬಂದ ಇನ್ಫೋಸಿಸ್ ಫೌಂಡೇಶನ್: 3700 ಮಂದಿಗೆ ಆಹಾರ ಕಿಟ್ ವಿತರಣೆ - Sudha Murty social service
ತಮ್ಮ ಸಾಮಾಜಿಕ ಕಳಕಳಿಯಿಂದ ಸದಾ ಜನರ ನೋವಿಗೆ ಆಸರೆಯಾಗುತ್ತಿರುವ ಇನ್ಫೋಸಿಸ್ ಫೌಂಡೇಶನ್ ಸದ್ಯ ಸಿನಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದೆ. ಚಿತ್ರರಂಗದ ಸುಮಾರು 3700 ಕಾರ್ಮಿಕರಿಗೆ ದಿನಸಿ ಕಿಟ್ ನೀಡುವ ಮೂಲಕ ಆಸರೆಯಾಗಿದೆ.
ಇನ್ಫೋಸಿಸ್ ಫೌಂಡೇಶನ್
ಇಂದು ಬನಶಂಕರಿಯ ನಾಗಲಕ್ಷಿ ಕಲ್ಯಾಣ ಮಂಟಪದ ಬಳಿ ಇನ್ಫೋಸಿಸ್ ಫೌಂಡೇಶನ್ ನಿಂದ ದಿನಸಿ ಕಿಟ್ಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದ್ ಪಡೆದರು. ಇನ್ನು ಚಿತ್ರರಂಗದಲ್ಲಿ ಒಟ್ಟು 18 ವಿಭಾಗಗಳಿದ್ದು, ಎಲ್ಲಾ ವಿಭಾಗದ ಅಧ್ಯಕ್ಷರಿಗೆ ಸಾ.ರಾ. ಗೋವಿಂದ್ ಅವರು ಈ ದಿನಸಿ ಕಿಟ್ ಗಳನ್ನು ಹಸ್ತಾಂತರಿಸಿದರು.