ಬೆಂಗಳೂರು:ಕಾಂಗ್ರೆಸ್ ಇಂದು ವಿಧಾನಸಭೆ ಕಲಾಪವನ್ನು ಬಹಿಷ್ಕರಿಸಿದೆ. ನಿನ್ನೆ ಬಜೆಟ್ ಕಲಾಪವನ್ನೂ ಬಹಿಷ್ಕರಿಸಿತ್ತು. ಇಂತಹ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ಕಾಂಗ್ರೆಸ್ ನಡೆಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಅನೈತಿಕ ಸರ್ಕಾರವಾಗಿದ್ದರೆ, ನೀವು ಸದನದಲ್ಲೇ ಇದ್ದು ಚರ್ಚಿಸಿ. ಅದನ್ನು ಬಿಟ್ಟು ಸದನ ಬಹಿಷ್ಕರಿಸಿದರೆ ಏನು ಪ್ರಯೋಜನ? ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಸಭಾತ್ಯಾಗ ಮಾಡಬಾರದು. ಸದನದೊಳಗೆ ಏನೇ ಇದ್ದರೂ ಚರ್ಚೆ ಮಾಡಿ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದರು. ಈಗ ಅವರೇ ಈ ರೀತಿ ತಪ್ಪಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.