ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ದೇಶದ ಮೊದಲ ವಾಟರ್‌ ಫಾಲ್‌ ರೆಸ್ಟೋರೆಂಟ್‌; ವಿಶೇಷಗಳೇನು?

ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌ ಸ್ಟೋನಿ ಬ್ರೂಕ್‌ ಇಂದಿನಿಂದ (ಅಕ್ಟೋಬರ್‌ 4) ಗ್ರಾಹಕರಿಗಾಗಿ ಪ್ರಾರಂಭವಾಗಿದೆ.

ದೇಶದ ಮೊದಲ ವಾಟರ್‌ ಫಾಲ್‌ ರೆಸ್ಟೋರೆಂಟ್‌

By

Published : Oct 4, 2019, 8:23 PM IST

ಬೆಂಗಳೂರು:ಬೆಂಗಳೂರಿನಲ್ಲಿ ರೆಸ್ಟೋರೆಂಟ್​​ಗಳಿಗೇನು ಕಡಿಮೆ‌ ಇಲ್ಲ. ಹೊಸ ಮತ್ತು ವಿನೂತನ ಶೈಲಿಯ ರೆಸ್ಟೋರೆಂಟ್​​ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಆದ್ರೆ ಇದೀಗ ಹೆಚ್ಚು ಸೌಂಡ್​ ಮಾಡ್ತಿರೋದು ಈ ವಾಟರ್ ಫಾಲ್ಸ್ ರೆಸ್ಟೋರೆಂಟ್.

ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌-ಸ್ಟೋನಿ ಬ್ರೂಕ್‌ ಇಂದಿನಿಂದ ಗ್ರಾಹಕರಿಗಾಗಿ ಪ್ರಾರಂಭವಾಗಿದೆ.

ವಾಟರ್‌ ಫಾಲ್‌ ರೆಸ್ಟೋರೆಂಟ್‌

ಕಣ್ಣು ತಂಪೆನಿಸುವ, ಕಿವಿಗೆ ಇಂಪೆನಿಸುವ ಝುಳು ಝುಳು ನೀರಿನ ಶಬ್ದ ಕೇಳುತ್ತಾ ಹರಿಯುತ್ತಿರುವ ನೀರಿನಲ್ಲಿ ಪಾದಗಳನ್ನು ಆಡಿಸುತ್ತಾ ಭೋಜನ ಸವಿಯುವ ಅವಕಾಶ ಬಹಳಷ್ಟು ಜನರಿಗೆ ಸುಲಭವಾಗಿ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಆ ರೆಸ್ಟೋರೆಂಟ್ ಒಳಗೆ ಒಕ್ಕರೆ ಅಂತಹ ಸುಂದರ ಅನುಭೂತಿಯನ್ನ ಪಡೆಯುವ ಅಪರೂಪದ ಅವಕಾಶವನ್ನು ವಿರೌಡ್ ವೆಂಚರ್ಸ್​​ನ ಮಾಲೀಕ ವಿನಯ್‌ ಕಲ್ಪಿಸಿಕೊಟ್ಟಿದ್ದಾರೆ.

ವಾಟರ್‌ ಫಾಲ್‌ ರೆಸ್ಟೋರೆಂಟ್‌

ಸ್ಟ್ರೀಂ ರೆಸ್ಟೋರೆಂಟ್​ನ ವಿಶೇಷತೆಗಳೇನು ಗೊತ್ತಾ?:

ಬರೋಬ್ಬರಿ 10 ಸಾವಿ ಲೀಟರ್‌‌ ಪುನರ್ಬಳಕೆ ನೀರನ್ನು ಬಳಸಿ ಈ ರೆಸ್ಟೋರೆಂಟ್​​ನಲ್ಲಿ ನೀರು ಹರಿಯುವ ಪ್ರದೇಶವನ್ನು ನಿರ್ಮಿಸಲಾಗಿದೆ. ಹೋಟೆಲ್‌ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಒಂದು ಬಾರಿಗೆ 250 ಮಂದಿ ಹರಿಯುವ ನೀರಿನಲ್ಲಿ ಕುಳಿತು ಭೋಜನ ಸವಿಯುವ ವ್ಯವಸ್ಥೆ ಇಲ್ಲಿದೆ.

ವಾಟರ್‌ ಫಾಲ್‌ ರೆಸ್ಟೋರೆಂಟ್‌

ಫಿಲಿಫೈನ್ಸ್‌ ದೇಶದ ವಾಟರ್‌ ಫಾಲ್‌ ರೆಸ್ಟೋರೆಂಟ್​​ನಿಂದ ಪ್ರಭಾವಿತಗೊಂಡು ರಾಜಧಾನಿಯ ಜನರಿಗೆ ಹೊಸತಾದ ಅನುಭವ ನೀಡುವ ಉದ್ದೇಶದಿಂದ ಈ ಹರಿಯುವ ನೀರಿನ ರೆಸ್ಟೋರೆಂಟನ್ನು ಪ್ರಾರಂಭಿಸಿದ್ದಾರೆ.

ಈ ರೆಸ್ಟೋರೆಂಟ್​​ನ ಮತ್ತೊಂದು ವಿಶೇಷ ಅಂದರೆ ಫಿಶ್ ಪೆಡಿಕ್ಯೂರ್‌. ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ಬಿಟ್ಟು ಮೊದಲು ಫಿಶ್ ಪೆಡಿಕ್ಯೂರ್​ನಲ್ಲಿ ಕಾಲಿಟ್ಟು ಕಾಲ ಕಳೆಯಬಹುದು. ಕೇವಲ ಹರಿಯುವ ನೀರು ಅಷ್ಟೇ ಅಲ್ಲದೇ 5 ರೀತಿಯ ಸೀಟಿಂಗ್‌ ಏರಿಯಾವನ್ನು ಸ್ಟೋನೀ ಬ್ರೂಕ್​ನಲ್ಲಿ ನಿರ್ಮಿಸಲಾಗಿದೆ. ಸ್ಟ್ರೀಂ ವಾಟ್‌, ಅಂಡರ್​ಗ್ರೌಂಡ್‌, ಅರ್ಥ, ರೂಫ್‌ ಟಾಪ್‌ ಹಾಗೂ ಕಾರುಗಳಲ್ಲಿ ಸೀಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಬಳಸಿದ ಕಾರು ಹಾಗೂ ಇನ್ನಿತರೆ ವಾಹನಗಳಲ್ಲಿ ಡೈನಿಂಗ್‌ ಏರಿಯಾವನ್ನು ರಚಿಸಲಾಗಿದೆ. ಹಾಗೂ ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಪೇಪರ್ ಸ್ಟ್ರಾಗಳು ಇರುವುದು ವಿಶೇಷ.

ವಾಟರ್‌ ಫಾಲ್‌ ರೆಸ್ಟೋರೆಂಟ್‌

ಸ್ಟೋನಿ ಬ್ರೂಕ್​​ನಲ್ಲಿ ಚೈನೀಸ್‌, ಥಾಯಿ, ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಗೆ ಭಾರತದ ಎಲ್ಲಾ ತರಹೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ. ಇಲ್ಲಿ ಕಾಪರ್‌-ವುಡ್‌ ಫೈರ್‌ ಪಿಜ್ಜಾ ಸಿಗಲಿದೆ. ತಾಮ್ರದ ಕೋಟಿಂಗ್‌ನ ದೊಡ್ಡ ಒವನ್ ನಿರ್ಮಿಸಲಾಗಿದ್ದು, ಈ ಓವನ್​​ ಅನ್ನು ವುಡ್‌ ಫೈರ್​​ನಿಂದ ಬಿಸಿಗೊಳಿಸಲಾಗುತ್ತದೆ. ಸಕತ್‌ ಬ್ಯುಸಿಯಾಗಿರುವ ಬೆಂಗಳೂರಿಗರು ಒಂದಿಷ್ಟು ಇಲ್ಲಿಗೆ ಭೇಟಿಕೊಟ್ಟು ವಿಶೇಷ ಅನುಭವ ಪಡೆಯಬಹುದು.

ABOUT THE AUTHOR

...view details