ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದ ಮೊಟ್ಟಮೊದಲ ಎಕ್ಸ್‌ಪ್ರೆಸ್ ಕಾರ್ಗೋ ಟರ್ಮಿನಲ್ ಉದ್ಘಾಟನೆಯಾಗಿದ್ದು, 2 ಲಕ್ಷ ಚದರ ಅಡಿ ವಿಸ್ತೀರ್ಣದ ಟರ್ಮಿನಲ್‌ನಲ್ಲಿ ಪ್ರತ್ಯೇಕವಾಗಿ ಅಂತಾರಾಷ್ಟ್ರೀಯ ಕೊರಿಯರ್ಗಳ ಆಮದು ಮತ್ತು ರಫ್ತು ಕಾರ್ಯ ನಡೆಯಲಿದೆ.
ಟರ್ಮಿನಲ್ ಉದ್ಘಾಟನೆಯನ್ನು ಬೆಂಗಳೂರು ವಲಯದ ಸೀಮಾ ಶುಲ್ಕ ವಿಭಾಗದ ಮುಖ್ಯ ಆಯುಕ್ತರಾದ ಎಂ. ಶ್ರೀನಿವಾಸ್ ಮಾಡಿದ್ದು, 2,00,000 ಚದರ ಅಡಿ ವಿಸ್ತೀರ್ಣದ ಟರ್ಮಿನಲ್‌ನಲ್ಲಿ ಡಿಎಚ್‌ಎಲ್, ಎಕ್ಸ್‌ಪ್ರೆಸ್ ಮತ್ತು ಫೆಡ್‌ಎಕ್ಸ್ ಎಕ್ಸ್‌ಪ್ರೆಸ್ ಮೊದಲಾದ ಜಾಗತಿಕ ಎಕ್ಸ್‌ಪ್ರೆಸ್ ಕೊರಿಯರ್ ಸಂಸ್ಥೆಗಳು ಕಾರ್ಯ ನಿರ್ವಹಿಸಲಿವೆ. ಈ ಟರ್ಮಿನಲ್‌ನಲ್ಲಿ ಕಸ್ಟಮ್ಸ್ ಕಚೇರಿಗಳಿಗೆ ಪ್ರತ್ಯೇಕ ಸ್ಥಳ ಒದಗಿಸಲಾಗಿದೆ. ಲ್ಯಾಂಡ್‌ಸೈಡ್ ಮತ್ತು ಏರ್‌ಸೈಡ್ ಪ್ರದೇಶಗಳಿಗೆ ನೇರ ಸಂಪರ್ಕ ಹೊಂದಿದೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಾಪಾರ ಮತ್ತು ಆರ್ಥಿಕ ಪ್ರಗತಿಯಲ್ಲಿಗಮನಾರ್ಹ ಬದಲಾವಣೆಯಾಗಲಿದೆ.