ಬೆಂಗಳೂರು: ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಎರಡನೇ ದಿನ ವಸ್ತು ಪ್ರದರ್ಶನ ಉದ್ಘಾಟನೆ ಯಾಗಲಿದ್ದು, ಎಲ್ಲರ ಆಕರ್ಷಣೆಗೆ ಕೇಂದ್ರ ಬಿಂದುವಾಗಲಿದೆ.
ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ನಾಳೆ ಗಮನಸೆಳೆಯಲಿದೆ ವಸ್ತುಪ್ರದರ್ಶನ...!
ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಎರಡನೇ ದಿನ ವಸ್ತು ಪ್ರದರ್ಶನ ಉದ್ಘಾಟನೆ ಯಾಗಲಿದ್ದು, ಎಲ್ಲರ ಆಕರ್ಷಣೆಗೆ ಕೇಂದ್ರ ಬಿಂದುವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಐದು ದಿನದ ಸಮಾವೇಶವನ್ನು ಉದ್ಘಾಟಿಸಿದ್ದು, ಕಡೆಯ ದಿನವಾದ ಮಂಗಳವಾರ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಮಾರೋಪ ಸಮಾರಂಭ ನೆರವೇರಿಸಿ ಕೊಡಲಿದ್ದಾರೆ. ಇಂದು ಸಮಾವೇಶಕ್ಕೆ ಸಾಂಕೇತಿಕ ಚಾಲನೆ ಲಭಿಸಿದ್ದು ಎಲ್ಲಾ ಕಾರ್ಯಕ್ರಮಗಳು ನಾಳೆಯಿಂದ ಆರಂಭವಾಗಲಿವೆ. ಸಮಾವೇಶಕ್ಕೆ ಆಗಮಿಸುವ ನಾಗರಿಕರು, ವಿವಿಧ ರಾಜ್ಯಗಳ ಪ್ರತಿನಿಧಿಗಳು, ವಿದ್ಯಾರ್ಥಿ ಸಮೂಹಕ್ಕೆ ಅಗತ್ಯ ವಿಜ್ಞಾನ ಮಾಹಿತಿ ನೀಡುವ ಕಾರ್ಯವನ್ನು ಇಲ್ಲಿ ಮಾಡಲಾಗುತ್ತಿದೆ. ಅತ್ಯಂತ ಪ್ರಮುಖವಾಗಿ ವಸ್ತುಪ್ರದರ್ಶನ ಆಯೋಜನೆ ಮಾಡಿರುವುದೇ ಜನರಿಗೆ ವಿಜ್ಞಾನದ ಕುರಿತು ಮಾಹಿತಿ ನೀಡುವುದಕ್ಕಾಗಿ. ಇಂದು ಅಗತ್ಯ ಸಿದ್ಧತೆ ನಡೆಸಿಕೊಳ್ಳುತ್ತಿರುವ ಮಳಿಗೆಯವರು ನಾಳೆಯಿಂದ ಪರಿಪೂರ್ಣವಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಿದ್ದಾರೆ.
ನಾಳೆಯಿಂದ ನಾಲ್ಕು ದಿನ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಹಲವು ಆವಿಷ್ಕಾರಗಳು ಪರಿಚಯ ಮಾಡಿಕೊಳ್ಳುವ ಅವಕಾಶ ನಾಗರಿಕರಿಗೆ ಲಭಿಸಲಿದೆ.