ಬೆಂಗಳೂರು:ಕೊರೊನಾ ಸೋಂಕು ಪರೀಕ್ಷೆಗೆ ಈಗಾಗಲೇ ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಲ್ಯಾಬ್ಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ವಾಯುಸೇನೆಯು ನಗರದಲ್ಲಿ ಟೆಸ್ಟಿಂಗ್ ಲ್ಯಾಬ್ ಆರಂಭಿಸಿದೆ.
ಹೆಚ್ಚುತ್ತಿದೆ ಕೊರೊನಾ ಕಾರ್ಕೋಟಕ: ಟೆಸ್ಟಿಂಗ್ ಲಾಬ್' ಆರಂಭಿಸಿದ ಭಾರತೀಯ ವಾಯುಸೇನೆ - ಕೊವಿಡ್-19 ಟೆಸ್ಟಿಂಗ್ ಲಾಬ್
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈಗಾಗಲೇ ರಾಜ್ಯದ ಹಲವು ಕಡೆ ಕೊವಿಡ್-19 ಸೋಂಕು ಪರೀಕ್ಷಾ ಕೇಂದ್ರಗಳು ಆರಂಭವಾಗಿದ್ದು ಮುಂಜಾಗೃತ ಕ್ರಮವಾಗಿ ಬೆಂಗಳೂರು ನಗರದಲ್ಲಿ ಭಾರತೀಯ ವಾಯುಸೇನೆ ಟೆಸ್ಟಿಂಗ್ ಲ್ಯಾಬ್ ಆರಂಭಿಸಿದೆ.
ಭಾರತೀಯ ವಾಯುಸೇನೆ
ಎಚ್ಎಎಲ್ ಏರ್ ಪೋರ್ಟ್ ರಸ್ತೆಯಲ್ಲಿರುವ ಕಮಾಂಡ್ ಆಸ್ಪತ್ರೆಯಲ್ಲಿ ಐಎಎಫ್ ನ ಮೊದಲ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ಆರಂಭಿಸಲಾಗಿದೆ. ಬೆಂಗಳೂರು ಸೇರಿದಂತೆ ನೆರೆಹೊರೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ತ್ವರಿತವಾಗಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಶೀಘ್ರವಾಗಿ ವರದಿ ನೀಡಲು ಅನುಕೂಲವಾಗಲಿದೆ.
ಸದ್ಯ ಭಾರತೀಯ ವಾಯುಸೇನೆಯು ಬೆಂಗಳೂರು ಸೇರಿದಂತೆ ದೇಶದ 9 ನೆಲೆಗಳಲ್ಲಿ ತಲಾ 200-ರಿಂದ 300 ಹಾಸಿಗೆಗಳ ದಿಗ್ಬಂಧನ ಕೇಂದ್ರಗಳನ್ನು ತೆರೆದಿದೆ.