ಭಾರತೀಯ ವಾಯು ಪಡೆಯಿಂದ ಬೆಂಗಳೂರಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ - ಬೆಂಗಳೂರಲ್ಲಿ ಆಕ್ಸಿಜನ್ ಕೊರತೆ
ಭಾರತೀಯ ವಾಯುಪಡೆಯು ಜಾಲಹಳ್ಳಿಯ ವಾಯುನಿಲ್ದಾಣದಲ್ಲಿ 100 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಸೌಕರ್ಯವನ್ನು ಸ್ಥಾಪಿಸಲು ನಿರ್ಧರಿಸಿದೆ.
ಭಾರತೀಯ ವಾಯು ಪಡೆಯಿಂದ ಬೆಂಗಳೂರಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ
ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ಮಹಾನಗರದ ಜನರಿಗೆ ನೆರವು ನೀಡುವ ಉದ್ದೇಶದಿಂದ ಭಾರತೀಯ ವಾಯುಪಡೆಯು ಜಾಲಹಳ್ಳಿಯ ವಾಯುನಿಲ್ದಾಣದಲ್ಲಿ 100 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಸೌಕರ್ಯವನ್ನು ಸ್ಥಾಪಿಸಲು ನಿರ್ಧರಿಸಿದೆ.
ಮೊದಲಿಗೆ ಆಮ್ಲಜನಕ ಸಹಿತ 20 ಹಾಸಿಗೆಗಳ ಮೂಲಕ ಮೇ 6 ರಿಂದ ಈ ಸೌಕರ್ಯ ಕಾರ್ಯಾರಂಭ ಮಾಡಲಿದೆ. ರಾಜ್ಯ ಸರ್ಕಾರ ಒಮ್ಮೆ ಆಮ್ಲಜನಕ ಪೂರೈಕೆ ಲಭ್ಯತೆಯನ್ನು ಖಾತ್ರಿಪಡಿಸಿದ ನಂತರ ಉಳಿದ 80 ಹಾಸಿಗೆಗಳು ಮೇ 20ರ ವೇಳೆಗೆ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದೆ.